ಕೋಲಾರದಲ್ಲಿ ಸುರಿಯುತ್ತಿರುವ ಸತತ ಮಳೆಯಿಂದಾಗಿ ಮಿನಿ KRS ಎಂದೇ ಪ್ರಖ್ಯಾತಿ ಪಡೆದಿರುವ ಯರಗೋಳ್ ಡ್ಯಾಂ ಭರ್ತಿಯಾಗಿದೆ.
ಕೋಲಾರ ಜಿಲ್ಲೆ ಬಂಗಾರಪೇಟೆ ತಾಲೂಕಿನಲ್ಲಿರುವ ಯರಗೋಳ್ ಡ್ಯಾಂ ನಲ್ಲಿ ನೀರು ಭರ್ತಿಯಾಗಿ ತಮಿಳುನಾಡಿಗೆ ಹರಿಯುತ್ತಿದೆ. ಸುಮಾರು 375 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಿರುವ ಈ ಅಣೆಕಟ್ಟು ಇದೇ ಮೊದಲ ಬಾರಿಗೆ ತುಂಬಿದ್ದು,ಸ್ಥಳೀಯರಲ್ಲಿ ಖುಷಿ ತಂದಿದೆ.
ಇನ್ನು ತಮಿಳುನಾಡಿಗೆ ವ್ಯರ್ಥವಾಗಿ ಹರಿದು ಹೋಗ್ತಿದ್ದ ನೀರಿಗೆ ಅಡ್ಡಲಾಗಿ ಈ ಯರಗೋಳ್ ಡ್ಯಾಂ ನಿರ್ಮಿಸಲಾಗಿದ್ದು ಇದರಿಂದ ಸುಮಾರು 45 ಹಳ್ಳಿಗೆ ಕುಡಿಯುವ ನೀರು ಪೂರೈಸಲಾಗುತ್ತಿದೆ. ಈ ಡ್ಯಾಂ ಅಡಿ ಎತ್ತರ,1358 ಅಡಿ ಅಗಲವಿದೆ.
PublicNext
04/08/2022 09:02 am