ಪ್ರಬಲ ಭೂಕಂಪದಿಂದ ತೈವಾನ್ ದೇಶ ನಡುಗಿ ಹೋಗಿದೆ. ಜನಜೀವನ ಸಂಪೂರ್ಣ ಡೋಲಾಯಮಾನವಾಗಿದೆ. ರಸ್ತೆಗಳು, ಸೇತುವೆಗಳು, ಜನವಸತಿ ಕಟ್ಟಡಗಳು, ದೊಡ್ಡ ಫ್ಲೈಓವರ್‌ಗಳು ನೆಲಸಮವಾಗಿವೆ. ಇದೆಲ್ಲದರ ನಡುವೆ ಅಲ್ಲಿನ ಜನಕ್ಕೆ ಈಗ ಸುನಾಮಿ ಅಲೆಗಳ ಭೀತಿಯೂ ಎದುರಾಗಿದೆ.
ಕಳೆದ 24ಗಂಟೆಗಳಲ್ಲಿ ಇಡೀ ತೈವಾನ್ ತತ್ತರಿಸಿದೆ. ಇದಕ್ಕೆ ಸಂಬಂಧಿಸಿದ ಕೆಲ ವಿಡಿಯೋಗಳು ವೈರಲ್ ಆಗಿದ್ದು ಅದರ ಭೀಕರತೆ ಎದೆನಡುಗಿಸುವಂತಿದೆ. ಸಮುದ್ರದ ಅಲೆಗಳು ರೌದ್ರ ನರ್ತನ ತೋರುತ್ತಿವೆ. ಹರಿದ್ವರ್ಣ ಪರ್ವತದಲ್ಲಿ ದಟ್ಟ ಧೂಳು ಮೇಲೇಳುತ್ತಿದೆ. ಒಟ್ಟಾರೆ ತೈವಾನ್‌ನಲ್ಲಿ ಪ್ರಕೃತಿ ವಿಕೋಪ ಮತ್ತಷ್ಟು ವಿಕೋಪದತ್ತ ಸಾಗಿದೆ.
PublicNext
19/09/2022 08:52 am