ವಾಷಿಂಗ್ಟನ್: ಪ್ರಬಲ ಚಂಡಮಾರುತದ ಬಳಿಕ ಅಮೆರಿಕದ ದಕ್ಷಿಣ ಡಕೋಟಾ, ನೆಬ್ರಸ್ಕಾ ಮತ್ತು ಅಯೋವಾ ರಾಜ್ಯಗಳ ಹಲವಾರು ನಗರಗಳಲ್ಲಿ ಆಕಾಶವು ಹಸಿರು ಬಣ್ಣಕ್ಕೆ ತಿರುಗಿತು. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಅಮೆರಿಕದ ರಾಷ್ಟ್ರೀಯ ಹವಾಮಾನ ಸೇವೆ (NWS) ಚಂಡಮಾರುತವನ್ನು 'ಡೆರೆಕೋ' ಎಂದು ಹೆಸರಿಸಿದೆ. ಇದು ಪ್ರಬಲವಾದ ಗಾಳಿಯನ್ನು ತಂದಿತ್ತು. ಕೆಲವು ಪ್ರದೇಶಗಳಲ್ಲಿ ಸುಮಾರು ಪ್ರತಿ ಗಂಟೆಗೆ 159 ಕಿ.ಮೀ ವೇಗವನ್ನು ಹೊಂದಿತ್ತು. "ಅಂತಹದನ್ನು ಎಂದಿಗೂ ನೋಡಿಲ್ಲ" ಎಂದು ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ಹಸಿರು ಆಕಾಶದ ಚಿತ್ರವನ್ನು ಹಂಚಿಕೊಂಡಿದ್ದಾರೆ.
PublicNext
07/07/2022 02:33 pm