ಬೀಜಿಂಗ್: 6.1 ತೀವ್ರತೆಯಲ್ಲಿ ಭೂಕಂಪ ಸಂಭವಿಸಿದ ಪರಿಣಾಮ ನೈಋತ್ಯ ಚೀನಾದ ಸಿಚುವಾನ್ ಪ್ರಾಂತ್ಯದ ಯಾನ್‌ನಲ್ಲಿ ನಾಲ್ವರು ಮೃತಪಟ್ಟಿದ್ದಾರೆ ಹಾಗೂ 14 ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಅವಶೇಷಗಳ ಅಡಿ ಸಿಲುಕಿದವರನ್ನು ರಕ್ಷಿಸಲು ಅಗ್ನಿ ಶಾಮಕ ಹಾಗೂ ತುರ್ತು ಸೇವೆ ಸಿಬ್ಬಂದಿ ದೌಡಾಯಿಸಿದ್ದಾರೆ. ಎಲ್ಲ ಸಾವು ನೋವುಗಳು ಬಾಕ್ಸಿಂಗ್ ಕೌಂಟಿಯಲ್ಲೇ ಆಗಿವೆ ಎಂದು ಯಾನ್ ಭೂಕಂಪ ಪರಿಹಾರ ಕೇಂದ್ರದಿಂದ ತಿಳಿದುಬಂದಿದೆ. ಸಾರ್ವಜನಿಕ ಭದ್ರತಾ ಕಚೇರಿಯಿಂದ ವೈದ್ಯಕೀಯ ಸಿಬ್ಬಂದಿ, ರಕ್ಷಣಾ ಸಿಬ್ಬಂದಿ ಸೇರಿ ಸುಮಾರು 800 ಸಿಬ್ಬಂದಿಯನ್ನು ಭೂಕಂಪ ಬಾಧಿತ ಪ್ರದೇಶಕ್ಕೆ ಕಳುಹಿಸಲಾಗಿದೆ.
PublicNext
02/06/2022 07:37 am