ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: 6 ಅಡಿ ಜೀವಂತ ಮೊಸಳೆ ಸೆರೆ ಹಿಡಿದು ಗ್ರಾಮಕ್ಕೆ ಹೊತ್ತು ತಂದ ಯುವಕರ ಗುಂಪು!

ವರದಿ- ಸಂತೋಷ ಬಡಕಂಬಿ

ಚಿಕ್ಕೋಡಿ:ದೂಧಗಂಗಾ ನದಿ ಪಕ್ಕದಲ್ಲಿರುವ ನಿಪ್ಪಾಣಿ ತಾಲೂಕಿನ ಕಾರದಗಾ ಗ್ರಾಮದಲ್ಲಿ 6 ಅಡಿ ಉದ್ದದ ಮೊಸಳೆಯನ್ನು ಯುವಕರ ಗುಂಪು ಸೆರೆ ಹಿಡಿದು ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ.

ಬರೋಬ್ಬರಿ 6 ಅಡಿಯ ಈ ಮೊಸಳೆಯು ಗ್ರಾಮಸ್ಥರ ನಿದ್ದೆಗೆಡಿಸಿತ್ತು. ಈಗ ಗ್ರಾಮದ ಯುವಕರು ಜೀವಂತವಾಗಿ ಇದನ್ನ ಸೆರೆಹಿಡಿದು ಕೆಚ್ಚೆದೆಯ ಕಾರ್ಯಕ್ಕೆ ಸಾಕ್ಷಿಯಾಗಿದ್ದು, ಕಾರದಗಾ ಸೇರಿ ಪಕ್ಕದ ಗ್ರಾಮಸ್ಥರಿಂದ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಗುರುವಾರ ಸಂಜೆ ಸಮಯದಲ್ಲಿ ಬಂಡು ಗಾವಡೆ ಎನ್ನುವ ಯುವಕ ಕಾರದಗಾ ಗ್ರಾಮದ ದೂಧಗಂಗಾ ನದಿಯಲ್ಲಿ ಮೀನುಗಾರಿಕೆಗೆ ಜಾಳಿಗೆಯನ್ನು ಹಾಕಿದನು. ಮೀನು ಹಿಡಿಯುತ್ತಿದ್ದ ಸಂಧರ್ಭದಲ್ಲಿ ದೊಡ್ಡ ‌ಮೀನು‌ ಸಿಕ್ಕಿಬಿದ್ದಿದೆಂದುಕೊಂಡಿದ್ದನು. ಆದರೆ ಅದು ಮೊಸಳೆಯಾಗಿತ್ತು ಇದೇ ಸಂಧರ್ಭದಲ್ಲಿ ಹಗ್ಗದಿಂದ ಮೊಸಳೆಯನ್ನು ಕಟ್ಟಿಹಾಕಿದ್ದಾನೆ. ನಂತರ ಮೀನುಗಾರ ಬಂಡು ಗಾವಡೆ, ಕಿಸಾಳೆ ಮಧಾಳೆ, ಸುಶಾಂತ ಶಿಂಗೆ, ನಾಗೇಶ ಕಾಂಬಳೆ, ಸಾತಪ್ಪಾ ಡಾಂಗೆ, ನಾಗೇಶ ಕರಾಳೆ, ಭಾವುಸೋ ಗಾವಡೆ, ಪ್ರದೀಪ ಕುರಣೆಯವರು ಈ ಯುವಕರು ಧೈರ್ಯ ಮಾಡಿ ಮೊಸಳೆಯನ್ನು ಹೊತ್ತು ತಂದು ಗ್ರಾ.ಪಂ ಕಚೇರಿಯ ಮುಂದೆ ತಂದು ಬಿಟ್ಟರು.

ಮೊಸಳೆಯನ್ನು ನೋಡಲು ಜನರು ಮುಗಿಬಿದ್ದರು, ಮೀನು ಹಿಡಿಯಲು ಹೋದ ಸಂಧರ್ಭದಲ್ಲಿ ಬೃಹತ್ತಾದ ಮೀನು ಎಂಬಂತೆ ನನಗೆ ಕಂಡು ಬಂತು ಅಸಲಿಗೆ ಅದು ಮೊಸಳೆಯಾಗಿತ್ತು. ಸ್ನೇಹಿತರೆಲ್ಲರು ಸೇರಿಕೊಂಡು ಮೊಸಳೆಯನ್ನು ಜೀವಂತವಾಗಿ ಸೆರೆಹಿಡಿದಿದ್ದೇವೆ ಎನ್ನುತ್ತಾರೆ ಮೀನುಗಾರ ಬಂಡು ಗಾವಡೆ.

ಸದ್ಯ ಈ ಮೊಸಳೆಯನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.

Edited By :
PublicNext

PublicNext

29/07/2022 02:47 pm

Cinque Terre

53.82 K

Cinque Terre

0

ಸಂಬಂಧಿತ ಸುದ್ದಿ