ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿದ್ಯುತ್ ಸ್ಪರ್ಶದಿಂದ ಹಸುವನ್ನು ರಕ್ಷಿಸಿದ ಯುವಕರು: ನೆಟ್ಟಿಗರ ಮೆಚ್ಚುಗೆ

ಮಾನ್ಸಾ: ಮೂವರು ಯುವಕರು ಜೀವದ ಹಂಗು ತೊರೆದು ಹಸುವನ್ನ ವಿದ್ಯುತ್ ಸ್ಪರ್ಶದಿಂದ ರಕ್ಷಿಸಿದ್ದಾರೆ. ಪಂಜಾಬ್‌ನ ಮಾನಸ ನಗರದಲ್ಲಿ ನಡೆದಿದೆ. ಈ ಘಟನೆ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಗೋ ರಕ್ಷಕನನ್ನ ಶ್ಲಾಘಿಸಿದ ಇಂಟರ್ನೆಟ್ ಬಳಕೆದಾರರು, ನಿಮಗೆ ಕೃತಜ್ಞತೆ ಎನ್ನುತ್ತಿದ್ದಾರೆ. ಅಂದ್ಹಾಗೆ, ನೀರು ತುಂಬಿದ ಪ್ರದೇಶದ ವಿದ್ಯುತ್ ಕಂಬದ ಬಳಿ ಹಸು ನಿಂತಿದ್ದು, ಒದ್ದೆಯಾದ ಕಂಬವನ್ನ ಸ್ಪರ್ಶಿಸುತ್ತಿದ್ದಂತೆ, ವಿದ್ಯುತ್ ಆಘಾತಕ್ಕೆ ಒಳಗಾಗಿ ನೋವಿನಿಂದ ನಲುಗುತ್ತೆ. ಆಗ ಜಾನುವಾರು ನೋವಿನಿಂದ ನರಳುತ್ತಿರುವುದನ್ನು ನೋಡಿದ ವ್ಯಕ್ತಿ ತನ್ನ ಜೀವವನ್ನ ಪಣಕ್ಕಿಟ್ಟು ವಿದ್ಯುತ್ ಕಂಬದಿಂದ ಅದನ್ನು ರಕ್ಷಿಸುತ್ತಾನೆ.

ವಿದ್ಯುತ್ ಆಘಾತದಿಂದ ಹಸು ನೋವಿನಿಂದ ನರಳಲು ಪ್ರಾರಂಭಿಸಿದಾಗ, ಅಂಗಡಿಯಿಂದ ಹೊರ ಬಂದ ವ್ಯಕ್ತಿ ಹಸುವಿನ ಕಾಲುಗಳಿಗೆ ಬಟ್ಟೆಯನ್ನ ಕಟ್ಟಿ ಕಂಬದಿಂದ ಅದನ್ನ ಎಳೆದುಕೊಂಡು ಬಂದು ರಕ್ಷಿಸುತ್ತಾನೆ. ಇನ್ನು ಈತನಿಗೆ ಇನ್ನೊಬ್ಬ ವ್ಯಕ್ತಿ ಸಹಾಯ ಮಾಡಿದ್ದಾನೆ. ನಂತರ ಹಸು ಸುರಕ್ಷಿತ ಸ್ಥಳಕ್ಕೆ ಹೋಗಿದ್ದನ್ನು ವಿಡಿಯೋದಲ್ಲಿ ನೋಡಬೋದು. ಜಾನುವಾರ ಜೀವ ಉಳಿಸುವಲ್ಲಿ ವ್ಯಕ್ತಿ ತೋರಿದ ಧೈರ್ಯಶಾಲಿ ಮತ್ತು ದಯಾಪರ ಕ್ರಮಕ್ಕಾಗಿ ನೆಟ್ಟಿಗರು ಆತನನ್ನ ಶ್ಲಾಘಿಸುತ್ತಿದ್ದಾರೆ.

Edited By : Nagaraj Tulugeri
PublicNext

PublicNext

05/07/2022 11:12 pm

Cinque Terre

185.99 K

Cinque Terre

6

ಸಂಬಂಧಿತ ಸುದ್ದಿ