ಕ್ವೀನ್ಸ್‌ಲ್ಯಾಂಡ್: ಆಸ್ಟ್ರೇಲಿಯಾದ ಕ್ವೀನ್ಸ್‌ಲ್ಯಾಂಡ್ ಸಮುದ್ರ ತೀರದಲ್ಲಿ ಮನುಷ್ಯರಂತೆ ಕೈಗಳನ್ನು ಹೊಂದಿರುವ ವಿಚಿತ್ರ ಪ್ರಾಣಿಯ ಕಳೇಬರ ಪತ್ತೆಯಾಗಿದೆ.
ಸಮುದ್ರ ತೀರದ ಅಲೆಗಳ ಹೊಡೆತಕ್ಕೆ ಈ ಪ್ರಾಣಿಯು ಹೊರಬಿದ್ದು ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ. ಇದರ ಕೈಗಳಲ್ಲಿ ಉಗುರುಗಳಿದ್ದು ಹೆಚ್ಚು ಕಡಿಮೆ ಏಲಿಯನ್ಸ್‌ಗಳ ದೈಹಿಕ ರಚನೆಯನ್ನು ಹೊಂದಿದೆ. ಈ ಪ್ರಾಣಿಯ ಸಂತತಿ, ಇರುವಿಕೆ ಬಗ್ಗೆ ಈಗ ಆಸ್ಟ್ರೇಲಿಯಾದಲ್ಲಿ ಚರ್ಚೆಗಳು ನಡೆಯುತ್ತಿವೆ. ಅಲೆಕ್ಸ್ ಟಾನ್ ಎಂಬಾತ ಇದರ ವಿಡಿಯೋ ಮಾಡಿ ಅದನ್ನು ಇನ್ಸ್ಟಾಗ್ರಾಮ್ ಪೇಜ್‌ನಲ್ಲಿ ಪೋಸ್ಟ್ ಮಾಡಿದ್ದಾನೆ.
PublicNext
30/03/2022 11:23 pm