ಬ್ರಿಟನ್: ಇಲ್ಲಿಯ ನಿವಾಸಿ ಡೌಗ್ಲಾಸ್ ಸ್ಮಿತ್ ತಮ್ಮ ಟೆರಸ್ ಮೇಲೆ ಒಂದೇ ಗಿಡದಲ್ಲಿ 839 ಟೊಮೆಟೊ ಬೆಳೆದು ದಾಖಲೆ ನಿರ್ಮಿಸಿದ್ದರು. ಈಗ ಇದೇ ಸ್ಮಿತ್ ಮತ್ತೊಂದು ದಾಖಲೆ ಮಾಡಿದ್ದಾರೆ.
ಟೆರಸ್ ಮೇಲೆ ಮತ್ತೊಮ್ಮೆ ಟೊಮೆಟೊ ಗಿಡ ನೆಟ್ಟಿದ್ದಾರೆ. ಈ ಟೊಮೆಟೊ ಗಿಡದಲ್ಲಿ ಈ ಸಲ 1,269 ಟೊಮೆಟೊಗಳು ಬಿಟ್ಟಿವೆ. ಅಲ್ಲಿಗೆ ಸ್ಮಿತ್ ತಮ್ಮ ಈ ಹಿಂದಿನ ದಾಖಲೆಯನ್ನ ತಾವೇ ಬ್ರೇಕ್ ಮಾಡಿದ್ದಾರೆ.
ದಾಖಲೆಯ ಟೊಮೆಟೊ ಬೆಳೆಯ ಫೋಟೋವನ್ನ ಸ್ಮಿತ್ ಈಗ ಸೋಷಿಯಲ್ ಮೀಡಿಯಾದಲ್ಲೂ ಹಂಚಿಕೊಂಡಿದ್ದಾರೆ. ಆ ಫೋಟೋಗಳು ಹೆಚ್ಚು ಗಮನ ಸೆಳೆಯುತ್ತಿವೆ.
PublicNext
14/03/2022 11:02 am