ಮೈಸೂರು:ಜಮೀನಿಗೆ ಅಳವಡಿಸಿದ್ದ ಸೋಲಾರ್ ತಂತಿಗೆ ಗಂಡು ಚಿರತೆಯೊಂದು ಸಿಲುಕಿಕೊಂಡು ನರಳಾಡಿದ ಘಟನೆ ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಮುಳ್ಳೂರು ಗ್ರಾಮದಲ್ಲಿ ನಡೆದಿದೆ.
ಬಾಳೆ ತೋಟದ ರಕ್ಷಣೆಗೆ ಸೋಲಾರ್ ತಂತಿ ಅಳವಡಿಸಿದ್ದರು. ಇದೇ ತಂತಿಗೇನೆ 4 ವರ್ಷದ ಗಂಡು ಚಿರತೆ ಸಿಲುಕಿಕೊಂಡಿತ್ತು. ಬಿಡಿಸಿಕೊಳ್ಳಲಾಗದೆ ನರಳಾಡುತ್ತಿತ್ತು.
ಈ ವಿಷಯ ತಿಳಿದ ಅರಣ್ಯ ಇಲಾಖೆ ಎಸಿಎಫ್ ರವಿಕುಮಾರ್ ನೇತೃತ್ವದಲ್ಲಿ ಸಿಬ್ಬಂದಿ ಚಿರತೆಗೆ ಅರವಳಿಕೆ ಚುಚ್ಚು ನೀಡಿದ್ದಾರೆ. ಬಳಿಕ ಅದನ್ನ ಸೆರೆ ಹಿಡಿದು ಚಿಕಿತ್ಸೆ ನೀಡಿದ್ದಾರೆ. ಚಿಕಿತ್ಸೆ ಬಳಿಕ ಈ ಗಂಡು ಚಿರತೆಯನ್ನ ಅರಣ್ಯದೊಳಗೆ ಬಿಟ್ಟಿದ್ದಾರೆ ಅರಣ್ಯ ಅಧಿಕಾರಿಗಳು.
PublicNext
23/01/2022 03:57 pm