ತಮಿಳುನಾಡು - ಸಾವಿನ ಸನಿಹದಲ್ಲಿದ್ದ ಮಂಗವೊಂದಕ್ಕೆ ಆಂಬ್ಯುಲೆನ್ಸ್ ಡ್ರೈವರ್ ಸಿಪಿಆರ್ ಮೂಲಕ ಮರುಜೀವ ನೀಡಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ನಾಯಿಗಳ ದಾಳಿಯಿಂದ ತಪ್ಪಿಸಿಕೊಂಡು ನೆಲಕ್ಕೆ ಕುಸಿದ ಮಂಗ ಉಸಿರಾಟವನ್ನೇ ನಿಲ್ಲಿಸಿತ್ತು. ಆಗ ಹೃದಯ ಮತ್ತು ಶ್ವಾಸಕೋಶ ಕಾಯಿಲೆಗೆ ಪ್ರಾಥಮಿಕ ಚಿಕಿತ್ಸೆಯಾದ ಸಿಪಿಆರ್ ನೀಡಿ ಪ್ರಭು ಎಂಬುವವರು ಮಂಗದ ಜೀವ ಉಳಿಸಿದ್ದಾರೆ.
ಸಿಪಿಆರ್ ಪಡೆದ ಕೆಲವು ನಿಮಿಷಗಳ ನಂತರ ಮಂಗ ಉಸಿರಾಡಲು ಶುರು ಮಾಡಿತು. ನಂತರ ಪ್ರಭು ಅವರು ಈ ಮಂಗವನ್ನು ಪಶುವೈದ್ಯಕೀಯ ಆಸ್ಪತ್ರೆಗೆ ಕರೆದುಕೊಂಡು ಹೆಚ್ಚಿನ ಚಿಕಿತ್ಸೆಯನ್ನೂ ಕೊಡಿಸಿದ್ದಾರೆ. ಪ್ರಭು ಅವರ ಈ ಕಾರ್ಯ ನಿಜಕ್ಕೂ ಶ್ಲಾಘನೀಯ..
PublicNext
13/12/2021 07:38 pm