ಯಾದಗಿರಿ: ನಾಗರಹಾವು ಹುಚ್ಚಾಟ ನಡೆಸಿದ್ದ ವೃದ್ಧನೋರ್ವ ಅದೇ ಹಾವಿನಿಂದ ಐದಕ್ಕೂ ಹೆಚ್ಚು ಬಾರಿ ಕಚ್ಚಿಸಿಕೊಂಡು, ಮಸಣ ಸೇರಿದ ಘಟನೆ ಯಾದಗಿರಿ ಜಿಲ್ಲೆಯಲ್ಲಿ ನಡೆದಿದೆ.
ವಡಗೇರಾ ತಾಲೂಕಿನ ಗೋಡಿಹಾಳ ಗ್ರಾಮದ ಬಸವರಾಜ್ ಪೂಜಾರಿ ಮೃತ ವೃದ್ಧ ಎಂದು ಗುರುತಿಸಲಾಗಿದೆ. ವೃದ್ಧನನ್ನು ಸಾಯಿಸಿದ ನಾಗರಹಾವು ತಾನು ಕೂಡ ಸಾವನ್ನಪ್ಪಿದೆ.
ಸುಮಾರು 6 ಅಡಿ ಉದ್ದದ ನಾಗರಹಾವು ಮನೆಯೊಂದಕ್ಕೆ ಹೊಕ್ಕಿತ್ತು, ಅದನ್ನು ಹಿಡಿದ ಬಸವರಾಜ್ ಹೊರಗೆ ಬಂದಿದ್ದಾರೆ. ಬಳಿಕ ಅದರ ಜೊತೆಗೆ ಒಂದು ಗಂಟೆಗೂ ಅಧಿಕ ಹೊತ್ತು ಚೆಲ್ಲಾಟವಾಡಿದ್ದಾರೆ. ಇದರಿಂದ ಸಿಟ್ಟಿಗೆದ್ದ ಹಾವು ಸಿಕ್ಕ, ಸಿಕ್ಕ ಕಡೆ ಐದು ಬಾರಿ ಕಚ್ಚಿ ವೃದ್ಧನನ್ನು ಸಾಯಿಸಿ ತಾನು ಸಹ ಸಾವನ್ನಪ್ಪಿದೆ.
PublicNext
27/11/2021 09:12 pm