ಕೊಪ್ಪಳದಲ್ಲಿ ಕತ್ತೆ ಹಾಲಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಕ್ರಿಯೇಟ್ ಆಗಿದೆ. ಮಕ್ಕಳು ಹಾಗೂ ವೃದ್ಧರಿಗೆ ಡೆಂಘ್ಯೂ, ವೈರಲ್ ಇನ್ಫೆಕ್ಷನ್
ಮೈ-ಕೈ ನೋವು, ಜ್ವರದಿಂದ ಬಳಲುತ್ತಿರುವವರಿಗೆ ಕತ್ತೆ ಹಾಲು ಔಷಧಿಯಂತೆ, ಹಾಗಾಗಿ ಜನ ಮುಗಿಬಿದ್ದು ಹಾಲು ಖರೀದಿಸುತ್ತಿದ್ದಾರೆ.
ಮಕ್ಕಳ ಜ್ಞಾಪಕ ಶಕ್ತಿ ವೃದ್ಧಿಗೆ,ಕೆಮ್ಮು, ಕಾಮಾಲೆ, ಅಸ್ತಮಾ, ಗ್ಯಾಸ್ಟ್ರಿಕ್ ಗೆ ಕತ್ತೆ ಹಾಲು ರಾಮಬಾಣವೆಂಬುದು ಆಯುರ್ವೇದಲ್ಲಿ ಉಲ್ಲೇಖವಿದೆ.ಮಕ್ಕಳ ಬೆಳವಣಿಗೆಗೆ ಬೇಕಾದ ಶೇ 90 ರಷ್ಟು ಪೋಷಕಾಂಶ ಕತ್ತೆ ಹಾಲಿನಲ್ಲಿ ಇರುತ್ತದೆ.ಪಾಶ್ಚಾತ್ಯ ದೇಶಗಳಲ್ಲಿ ಸೌಂದರ್ಯ ವೃದ್ಧಿ, ಆಹಾರ ಉತ್ಪನ್ನಗಳಲ್ಲಿ ಕತ್ತೆ ಹಾಲು ಬಳಕೆ ಮಾಡಲಾಗುತ್ತಿದೆ.
ಗ್ರಾಮಗಳಲ್ಲಿ ಕತ್ತೆಗಳನ್ನು ಹಿಡಿದು ಕತ್ತೆ ಸಾಕಣಿಕೆ ಕುಟುಂಬಗಳು ಸುತ್ತುತಿದ್ದು ಲೋಟಕ್ಕೆ 50 ರಿಂದ 100 ರೂಪಾಯಿಯಂತೆ ಮಾರಾಟ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಕತ್ತೆಗೂ ಒಂದು ಕಾಲ ಬರುತ್ತೆ ಅಂತಾರಲ್ವಾ ಅದು ಇದಿಕ್ಕೆ ಅನಿಸುತ್ತೆ.
PublicNext
24/10/2021 10:29 am