ದಾವಣಗೆರೆ: ಶುಂಠಿ ಹೊಲದಲ್ಲಿ ಆರಾಮಾಗಿ ಬಂದು ಮಲಗಿತ್ತು. ಅದನ್ನು ನೋಡ್ತಿದ್ದಂತೆ ರೈತರು ಬೆಚ್ಚಿ ಬಿದ್ದಿದ್ದರು. ಒಮ್ಮೆಲೆ ಹೌಹಾರಿದ ಜನರು ಅರಣ್ಯ ಇಲಾಖೆಯ ಗಮನಕ್ಕೆ ತಂದರು. ತಕ್ಷಣವೇ ಹಾವು ಹಿಡಿಯುವವರಿಗೆ ಮಾಹಿತಿ ನೀಡಲಾಯಿತು. ಬಳಿಕ ಅರಣ್ಯ ಇಲಾಖೆಯ ಸಹಕಾರದೊಂದಿಗೆ ಅದನ್ನು ಹಿಡಿದು ತೆಗೆದುಕೊಂಡು ಹೋಗಲಾಯಿತು.
ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಫಲವನಹಳ್ಳಿ ಗ್ರಾಮದ ಹೊಲದಲ್ಲಿ ನಡೆದ ಆಪರೇಷನ್ ಹೆಬ್ಬಾವು ಸ್ಯಾಂಪಲ್ ಇದು.
ರೈತರೊಬ್ಬರ ಹೊಲದಲ್ಲಿ ಭಾರೀ ಗಾತ್ರದ ಹೆಬ್ಬಾವು ಕಾಣಿಸಿಕೊಂಡಿತ್ತು. 8 ರಿಂದ 10 ಅಡಿ ಉದ್ದ ಹಾಗೂ 15 ರಿಂದ 18 ಕೆಜಿ ತೂಕವಿತ್ತು.
ಹೆಬ್ಬಾವು ನೋಡುತ್ತಿದ್ದಂತೆ ಶಿವಮೊಗ್ಗದ ಸ್ನೇಕ್ ಕಿರಣ್ ಅವರಿಗೆ ವಿಷಯ ತಿಳಿಸಲಾಗಿತ್ತು ಕೂಡಲೇ ಸ್ಥಳಕ್ಕೆ ಆಗಮಿಸಿದ ಸ್ನೇಕ್ ಕಿರಣ್ ಅರಣ್ಯ ಇಲಾಖೆಯ ಅಧಿಕಾರಿಗಳಾದ ಕೃಷ್ಣಮೂರ್ತಿ, ನಿಂಗರಾಜ ಹರವಿ, ಚಂದ್ರಪ್ಪ, ಬಸವರಾಜ್ ಅವರ ಸಹಕಾರದೊಂದಿಗೆ ಹೆಬ್ಬಾವು ಹಿಡಿದು ದೂರದ ಅರಣ್ಯಕ್ಕೆ ಬಿಟ್ಟು ಬರಲಾಗಿದೆ.
PublicNext
28/07/2021 05:44 pm