ಕರ್ತವ್ಯದಿಂದ ನಿವೃತ್ತಿ ಹೊಂದಿದ ಅಧಿಕಾರಿಗಳಿಗೆ ಕಚೇರಿಯ ಸಿಬ್ಬಂದಿ ಸನ್ಮಾನ ಮಾಡಿ, ಬೀಳ್ಕೊಡುತ್ತಾರೆ. ಇಂತಹ ವಿಶೇಷ ಗೌರವಕ್ಕೆ ಶ್ವಾನವೊಂದು ಪಾತ್ರವಾಗಿದೆ.
ನಾಸಿಕ್ ಸಿಟಿ ಪೊಲೀಸ್ ಪಡೆ ಮತ್ತು ಬಾಂಬ್ ಪತ್ತೆದಳದಲ್ಲಿ 11 ವರ್ಷ ಕಾರ್ಯನಿರ್ವಹಿಸಿದ್ದ ಸ್ಪೈಕ್ ಹೆಸರಿನ ಶ್ವಾನವು ಸೇವೆಯಿಂದ ನಿವೃತ್ತಿಕೊಂಡಿದೆ. ಹೀಗಾಗಿ ಇಷ್ಟು ದಿನ ಪೊಲೀಸ್ ಇಲಾಖೆಗೆ ತನ್ನ ಚುರುಕು ಬುದ್ಧಿಯಿಂದಲೇ ನೆರವಾಗಿದ್ದ ಶ್ವಾನಕ್ಕೆ ಅದ್ಧೂರಿಯಾಗಿ ಬೀಳ್ಕೊಡುಗೆ ನೀಡಲಾಗಿದೆ. ಬಹುಶಃ ಈ ಬೀಳ್ಕೊಡುಗೆಯ ಕ್ಷಣದಿಂದ ಆ ಶ್ವಾನವೂ ಭಾವುಕವಾಗಿತ್ತೋ ಏನೋ.? ವಾಹನದ ಮೇಲೆ ಮಲಗಿದ್ದ ಮುದ್ದು ಶ್ವಾನದ ಮುಖ ಅಕ್ಷರಶಃ ಬಾಡಿದಂತೆ ಕಾಣುತ್ತಿತ್ತು.
ಗೋಲ್ಡನ್ ಲ್ಯಾಬ್ರಡಾರ್ ತಳಿಯ ಸ್ಪ್ರೈಕ್ 2010ರಲ್ಲಿ ನಾಸಿಕ್ ಬಾಂಬ್ ಡಿಟೆಕ್ಷನ್ ಡಾಗ್ ಸ್ಕ್ವಾಡ್‍ಗೆ ಸೇರಿತ್ತು. ಗುಪ್ತ ಪೆಟ್ರೋಲ್ ಬಾಂಬ್‍ಗಳನ್ನು ಪತ್ತೆ ಹಚ್ಚುವಲ್ಲಿ ಈ ಶ್ವಾನವು ಅತ್ಯಂತ ಪರಿಣತಿಯನ್ನು ಹೊಂದಿತ್ತು. ಇಂತಹ ಸ್ಪ್ರೈಕ್ ತನ್ನ ಸೇವಾವಧಿಯಲ್ಲಿ ಯಶಸ್ವಿಯಾಗಿ ಮುಗಿಸಿ ನಿವೃತ್ತಿಯಾಗಿದ್ದಾನೆ. ಫೆಬ್ರವರಿ 24 ಇವನ ಕೆಲಸದ ಕೊನೆಯ ದಿನ. ಹೀಗಾಗಿ ಈ ದಿನವನ್ನು ಪೊಲೀಸರು ಅತ್ಯಂತ ಸ್ಮರಣೀಯವನ್ನಾಗಿಸಿದ್ದರು. ಸ್ಪೈಕ್‌ಗೆ ಬೀಳ್ಕೊಟ್ಟ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
PublicNext
27/02/2021 06:24 pm