ಸಿಲಿಗುರಿ: ನಗರದ ಜನನಿಬಿಡ ರಸ್ತೆಯಲ್ಲಿ ನಿಲ್ಲಿಸಿದ್ದ ಸೈಕಲ್ ರಿಕ್ಷಾವೊಂದು ಚಾಲಕನಿಲ್ಲದೇ ಚಲಿಸಿದೆ. ಅಚ್ಚರಿ ಎಂದರೆ ತಂತಾನೇ ಮುಂದೆ ಹೋದ ಸೈಕಲ್ ರಿಕ್ಷಾ ವಾಪಸ್ ಇದ್ದ ಜಾಗಕ್ಕೆ ಬಂತು ನಿಂತಿದೆ.
ಪಶ್ಚಿಮ ಬಂಗಾಳದ ಸಿಲಿಗುರಿಯಲ್ಲಿ ನಡೆದಿದ್ದು ಎನ್ನಲಾದ ವಿಡಿಯೋ ಈಗ ವೈರಲ್ ಆಗುತ್ತಿದೆ. ಮಳೆ ಸುರಿಯುತ್ತಿರುವಾಗ ಈ ಸೈಕಲ್ ರಿಕ್ಷಾ ಮುಂದೆ ಹೋಗಿದೆ. ರಸ್ತೆ ಮಧ್ಯದಲ್ಲಿ ಅಡ್ಡಲಾಗಿ ನಿಂತು ಮತ್ತೆ ತಾನಿದ್ದ ಜಾಗಕ್ಕೆ ಬಂದಿದೆ. ಆಗ ಅದರ ಚಾಲಕ ಬಂದು ಅದನ್ನು ತಡೆ ಹಿಡಿದ್ದಾನೆ. ಈ ದೃಶ್ಯ ಕಂಡ ಸ್ಥಳೀಯರು ಹೋ ಎಂದು ಕೂಗಾಡಿದ್ದಾರೆ.
ಕೆಲವು ನೆಟಿಜನ್‌ಗಳ ಅಭಿಪ್ರಾಯದ ಪ್ರಕಾರ ಇದು ಗಾಳಿಯ ಹೊಡೆತಕ್ಕೆ ಹೀಗಾಗಿದೆ ಎಂದರೆ, ಇನ್ನೂ ಕೆಲವರು ಮಳೆ ಸುರಿಯುತ್ತಿರುವಾಗ ಈ ಮಟ್ಟಕ್ಕೆ ಗಾಳಿ ಬೀಸುತ್ತಾ? ಎಂದು ಪ್ರಶ್ನೆ ಮಾಡಿದ್ದಾರೆ. ಇನ್ನೂ ಕೆಲವರು ಇದು ದೆವ್ವ ಭೂತದ ಆಟ ಎನ್ನುತ್ತಿದ್ದಾರೆ.
PublicNext
05/06/2022 07:38 pm