ಪಾಕಿಸ್ತಾನ ತೀವ್ರ ಪ್ರವಾಹಕ್ಕೆ ಅಕ್ಷರಶಃ ತತ್ತರಿಸಿದ್ದು,ಸಾವು-ನೋವಿನ ಜೊತೆಗೆ ತೀವ್ರ ಆರ್ಥಿಕ ನಷ್ಟವನ್ನು ಎದುರಿಸುತ್ತಿದೆ. ಪಾಕ್ ಸಂಕಷ್ಟ ಕಂಡು ಪ್ರಧಾನಿ ಮೋದಿ ದುಃಖ ವ್ಯಕ್ತಿಪಡಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿದ ಪ್ರಧಾನಿ ಮೋದಿ, 'ಪಾಕಿಸ್ತಾನದಲ್ಲಿ ಪ್ರವಾಹದಿಂದ ಉಂಟಾದ ವಿನಾಶವನ್ನ ನೋಡಿ ದುಃಖಿತನಾಗಿದ್ದೇನೆ' ಎಂದಿದ್ದಾರೆ.
ಈ ನೈಸರ್ಗಿಕ ವಿಪತ್ತಿನಿಂದ ಬಾಧಿತರಾದವರ ಕುಟುಂಬಗಳಿಗೆ, ಗಾಯಗೊಂಡವರಿಗೆ ಮತ್ತು ಬಾಧಿತರಾದ ಎಲ್ಲರಿಗೂ ನಾವು ಸಂತಾಪಗಳನ್ನ ವ್ಯಕ್ತಪಡಿಸುತ್ತೇವೆ. ರಾಷ್ಟ್ರ ಶೀಘ್ರವಾಗಿ ಸಹಜ ಸ್ಥಿತಿಗೆ ಮರಳುವ ಭರವಸೆ ಹೊಂದಿದ್ದೇವೆ' ಎಂದು ಹೇಳಿದ್ದಾರೆ. ಜೂನ್‌ನಿಂದ ಪಾಕಿಸ್ತಾನದಲ್ಲಿ ಮಾನ್ಸೂನ್ ಪ್ರವಾಹದಿಂದ ಮೃತಪಟ್ಟವರ ಸಂಖ್ಯೆ 1,136 ಕ್ಕೆ ತಲುಪಿದೆ ಎಂದು ದೇಶದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ.
PublicNext
30/08/2022 01:42 pm