ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನೆಚ್ಚಿನ ಶ್ವಾನದ ಮೇಲಿನ ಪ್ರೀತಿ : ಬೃಹತ್ ಪ್ರತಿಮೆ ನಿರ್ಮಾಣ

ಪ್ರಾಣಿ ಪ್ರೀತಿ ಮೆರೆಯುವವರು ಜಗತ್ತಿನಲ್ಲಿ ತುಂಬಾ ಜನರಿದ್ದಾರೆ. ತಮ್ಮ ನೆಚ್ಚಿನ ಪ್ರಾಣಿ ಪಕ್ಷಿಗಳಿಗಾಗಿ ಎನ್ ಬೇಕಾದ್ರು ಮಾಡಲು ಸಿದ್ದರಿರುತ್ತಾರೆ.ಅದೇ ರೀತಿ ಶ್ವಾನದ ಮೇಲಿನ ಪ್ರೀತಿಗಾಗಿ ತುರ್ಕಮೇನಿಸ್ತಾನದ ರಾಜಧಾನಿ ಅಶ್ಗಾಬತ್ನ ಪ್ರಮುಖ ಸಂಚಾರ ವೃತ್ತದಲ್ಲಿ ಶ್ವಾನದ ಬೃಹತ್ ಮೂರ್ತಿಯನ್ನ ನಿರ್ಮಿಸಲಾಗಿದೆ.

ತುರ್ಕಮೇನಿಸ್ತಾನದ ಅಧ್ಯಕ್ಷ ಗರ್ಬಾಂಗುಲಿ ಬರ್ಡಿಮುಖಾಮೆಡೋವ್ ತಮ್ಮ ನೆಚ್ಚಿನ ತಳಿಯಾದ ಅಲಬೈ ಜಾತಿಯ ಶ್ವಾನದ ಮೇಲೆ ಪ್ರೀತಿ ಹಿನ್ನೆಲೆ ಈ ಪ್ರತಿಮೆ ನಿರ್ಮಿಸಿದ್ದಾರೆ.ಪ್ರತಿಮೆ ಅನಾವರಣದ ವಿಡಿಯೋವನ್ನ ಟ್ವಿಟರ್ ನಲ್ಲಿ ಪೋಸ್ಟ್ ಮಾಡಲಾಗಿದೆ. ಸಮಾರಂಭದಲ್ಲಿ ತುರ್ಕಮೇನಿಸ್ತಾನದ ಅಧ್ಯಕ್ಷ ಕೂಡ ಉಪಸ್ಥಿತರಿರೋದನ್ನ ಕಾಣಬಹುದಾಗಿದೆ.

ನಾಯಿಯ ಪ್ರತಿಮೆಯ ಕೆಳಗೆ ಎಲ್ಇಡಿ ಪರದೆ ಅಳವಡಿಸಲಾಗಿದ್ದು ಇದರಲ್ಲಿ ಅಲಬೈ ಶ್ವಾನದ ದೃಶ್ಯಗಳನ್ನ ಕಾಣಬಹುದಾಗಿದೆ.

ಅಶ್ಚರಿ ಅಂದ್ರೆ ಶ್ವಾನಗಳ ಕಟ್ಟಾ ಪ್ರೇಮಿ ಹಾಗೂ ಕುದುರೆ ಸವಾರಿ ಪ್ರಿಯರಾಗಿರುವ ಗರ್ಬಾಂಗುಲಿ ಈ ನಾಯಿ ತಳಿಯ ಬಗ್ಗೆ ಪುಸ್ತಕವನ್ನೂ ಬರೆದಿದ್ದಾರೆ.

Edited By : Manjunath H D
PublicNext

PublicNext

19/11/2020 02:56 pm

Cinque Terre

101.8 K

Cinque Terre

1