ನಮ್ಮಂತೆ, ನಿಮ್ಮಂತೆ ಪ್ರಾಣಿಗಳು ಕೂಡ ಸ್ನೇಹ ಜೀವಿಗಳು. ಇದಕ್ಕೆ ಸಾಕ್ಷಿಯೆಂಬಂತೆ ಅನೇಕ ವಿಡಿಯೋ, ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಟುತ್ತಲೇ ಇರುತ್ತವೆ. ಅಂತಹದ್ದೇ ವಿಡಿಯೋ ಒಂದು ನೆಟ್ಟಿಗರ ಮನ ಗೆದ್ದಿದೆ....
ಕುದುರೆ ಹಾಗೂ ಬೆಕ್ಕಿನ ದೋಸ್ತಿ ಕಂಡು ನೆಟ್ಟಿಗರ ಫುಲ್ ಫಿದಾ ಆಗಿದ್ದಾರೆ. ಸ್ನೇಹಕ್ಕೆ ಜಾತಿ, ಎತ್ತರ, ಬಣ್ಣದ ಹಂಗಿಲ್ಲ. ಇದು ಮನಸ್ಸು, ಹೃದಯಕ್ಕೆ ಸಂಬಂಧಿಸಿದ್ದು ಎಂಬುದಕ್ಕೆ ಈ ಅಪೂರ್ವ ದೃಶ್ಯ ಸಾಕ್ಷಿಯಾಗಿದೆ. ಚಾಂಪಿ ಆ್ಯಂಡ್ ಮೋರಿಸ್ ಎಂಬ ಇನ್ಸ್ಟಾಗ್ರಾಂ ಖಾತೆಯಲ್ಲಿ ಬೆಕ್ಕು ಹಾಗೂ ಬೆಕ್ಕಿನ ದೋಸ್ತಿಯ ಫೋಟೋ ಹಾಗೂ ವಿಡಿಯೋಗಳನ್ನು ಕಾಣಬಹುದಾಗಿದೆ.
ಸದಾ ಜೊತೆಯಾಗಿಯೇ ಇರಲು ಬಯಸುವ ಬೆಕ್ಕು ಹಾಗೂ ಕುದುರೆ ಒಂದನ್ನೊಂದು ಬಿಟ್ಟಿರುವುದಿಲ್ಲ. ಬೆಕ್ಕಿಗೆ ಕುದುರೆಯ ಮೇಲೆ ಕುಳಿತು ಸವಾರಿ ಮಾಡುವ ಖುಷಿ. ಕುದುರೆಗೂ ತನ್ನ ಫ್ರೆಂಡ್ ಜೊತೆ ಕಾಲ ಕಳೆಯುವ ಆಸೆ. ಈ ಸ್ನೇಹ ಜೀವಿಗಳಿಗೆ ಅನೇಕ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದು, ತಮ್ಮದೆ ರೀತಿಯಲ್ಲಿ ಕಮೆಂಟ್ ಮಾಡಿದ್ದಾರೆ.
PublicNext
10/11/2020 05:51 pm