ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೊರಟಗೆರೆ: ಹಳ್ಳದಲ್ಲಿ ಬೈಕ್ ಜೊತೆ ಕೊಚ್ಚಿ ಹೋದ ಯುವಕ; ಸ್ಥಳೀಯರಿಂದ ರಕ್ಷಣೆ

ಕೊರಟಗೆರೆ: ತಾಲ್ಲೂಕಿನ ವಡ್ಡಗೆರೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಕೊರಟಗೆರೆ - ವಡ್ಡಗೆರೆ ಮುಖ್ಯ ರಸ್ತೆಯ ಮಲಪ್ಪನಹಳ್ಳಿ ಗ್ರಾಮದ ದೊಡ್ಡ ಹಳ್ಳದಲ್ಲಿ ಶನಿವಾರ ರಾತ್ರಿ ಸುರಿದ ಮಳೆ ನೀರಿನ ರಂಭಸಕ್ಕೆ ಬೈಕ್ ಸಮೇತ ಯುವಕ ಕೊಚ್ಚಿ ಹೋಗಿದ್ದಾನೆ. ಕೆಲವು ಗಂಟೆಗಳ ಕಾರ್ಯಾಚರಣೆ ನಂತರ ಸ್ಥಳೀಯರ ಸಹಾಯದಿಂದ ಯುವಕನ ರಕ್ಷಣೆ ಮಾಡಲಾಗಿದೆ.

ಹಲವು ವರ್ಷಗಳಿಂದ ಉತ್ತಮ ಸೇತುವೆ ನಿರ್ಮಾಣ ಮಾಡಿ ಕೊಡಬೇಕು ಎಂದು ಇಲ್ಲಿನ ಗ್ರಾಮಸ್ಥರು ಒತ್ತಾಯಿಸುತ್ತಿದ್ದರು ಯಾವ ಅಧಿಕಾರಿ ಅಥವಾ ಜನಪ್ರತಿನಿಧಿ ಇತ್ತಕಡೆ ಗಮನ ಹರಿಸಿಲ್ಲ, ಪ್ರತಿ ಬಾರಿ ಮಳೆ ಬಂದಾಗಲೂ ನಮಗೆ ಈ ಸಮಸ್ಯೆ ಸೃಷ್ಟಿಯಾಗುತ್ತದೆ ಎಂದು ಅವಲತ್ತು ಕೊಂಡಿದ್ದಾರೆ. ಇನ್ನಾದರೂ ಅಧಿಕಾರಿವರ್ಗ ಎಚ್ಚೆತ್ತು ಸಮಸ್ಯೆಗೆ ಪರಿಹಾರ ಹುಡುಕುವ ರೇ ಎಂದು ಕಾದುನೋಡಬೇಕಿದೆ.

ವರದಿ ರಾಘವೇಂದ್ರ ದಾಸರಹಳ್ಳಿ ಪಬ್ಲಿಕ್ ನೆಕ್ಸ್ಟ್, ತುಮಕೂರು

Edited By : Somashekar
PublicNext

PublicNext

28/08/2022 08:24 pm

Cinque Terre

57.94 K

Cinque Terre

0