ಭೋಪಾಲ್ : ಇಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಜನ್ಮದಿನ ಈ ದಿನದಂದು ನಮೀಬಿಯಾದಿಂದ ಕರೆತಂದ ಚೀತಾಗಳನ್ನು ಮಹಾರಾಷ್ಟ್ರದ ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ಬಿಡಲಾಯಿತು.ಇನ್ನು ವಿಶೇಷ ವಿಮಾನದಲ್ಲಿ ಚೀತಾಗಳು ಭಾರತಕ್ಕೆ ಬಂದಿರುವುದು ಇತಿಹಾಸವಾಗಿದೆ. ನಮೀಬಿಯಾದಿಂದ ಒಟ್ಟು 8 ಚಿರತೆಗಳು ಬಂದಿದ್ದು, 5 ಗಂಡು ಹಾಗೂ 3 ಹೆಣ್ಣು ಚಿರತೆಗಳಿವೆ. ಇನ್ನು ಅಳಿವಿನಂಚಿನಲ್ಲಿರುವ ಚೀತಾಗಳನ್ನು ಇದೇ ಉದ್ಯಾನಕ್ಕೆ ಬಿಡಲು ಸಾಕಷ್ಟು ಕಾರಣಗಳಿವೆ.
ಕುನೋ ರಾಷ್ಟ್ರೀಯ ಉದ್ಯಾನ ಆಯ್ಕೆ ಯಾಕೆ?
ಮಧ್ಯಪ್ರದೇಶದ ಅರಣ್ಯ ಭೂಪ್ರದೇಶದಲ್ಲಿ ವಿಶಾಲವಾಗಿ 748 ಚ.ಕಿ.ಮೀ ವ್ಯಾಪ್ತಿಯಲ್ಲಿ ಕುನೋ ಪಾಲ್ಪುರ್ ರಾಷ್ಟ್ರೀಯ ಉದ್ಯಾನವನವು ವ್ಯಾಪಿಸಿಕೊಂಡಿದೆ. ಮಾನವನ ಸಂಚಾರವಿಲ್ಲದ ಪ್ರದೇಶವಾಗಿದ್ದು, ಕೊರಿಯಾದ ಸಾಲ್ ಕಾಡುಗಳಿಗೆ ಹತ್ತಿರದಲ್ಲಿದೆ.
ಚೀತಾಗಳಿಗೆ ವಾಸಿಸಲು ಸೂಕ್ತವಾದ ಹವಾಮಾನ ಬೇಕು. ಎತ್ತರದ ಪ್ರದೇಶ, ಕರಾವಳಿ, ಈಶಾನ್ಯ ಪ್ರದೇಶಗಳನ್ನು ಹೊರತುಪಡಿಸಿ ಉಳಿದೆಡೆ ಚಿರತೆಗಳ ನೆಲೆಯಾಗಿವೆ. ಹೀಗಾಗಿ ನಮೀಬಿಯಾದಿಂದ ಕರೆತರುತ್ತಿರುವ ಚೀತಾಗಳ ವಾಸಕ್ಕೆ ಯೋಗ್ಯವಾದ ಹವಾಮಾನ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿದೆ. ಇಲ್ಲಿ ಮನುಷ್ಯರ ಸಂಚಾರವಿಲ್ಲ. ಚೀತಾಗಳಿಗೆ ಭೇಟೆಯಾಡಿ ಆಹಾರ ಪಡೆದುಕೊಳ್ಳುವ ವಾತಾವರಣವಿದೆ.
ಈ ಉದ್ಯಾನವನ ಪರಿಸರದ ಸುತ್ತಮುತ್ತಲ 24 ಗ್ರಾಮಗಳ ಜನರನ್ನು ಖಾಲಿ ಮಾಡಿಸಲಾಗಿದೆ. ಹೀಗಾಗಿ ವೈಲ್ಡ್ ಲೈಫ್ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾ ಮತ್ತು ವೈಲ್ಡ್ ಲೈಫ್ ಟ್ರಸ್ಟ್ ಆಫ್ ಇಂಡಿಯಾ (WTI) ಕುನೋ ರಾಷ್ಟ್ರೀಯ ಉದ್ಯಾನವನವನ್ನು ಆಯ್ಕೆ ಮಾಡಿದೆ.
ಇನ್ನು 8 ಚೀತಾಗಳ ಸ್ಥಳಾಂತರಕ್ಕೆ 75 ಕೋಟಿ ರೂ. ಖರ್ಚು ಮಾಡಲಾಗಿದೆ.
PublicNext
17/09/2022 03:50 pm