ದಾವಣಗೆರೆ: ಹೊನ್ನಾಳಿ, ನ್ಯಾಮತಿ ತಾಲೂಕಿನಲ್ಲಿ ಮತ್ತೆ ಚಿರತೆ ಹಾವಳಿ ಶುರುವಾಗಿದೆ. ಎರಡು ವರ್ಷಗಳ ಹಿಂದೆ ಚಿರತೆಗಳ ದಾಳಿಗೆ ಜನರು ಬೇಸತ್ತು ಹೋಗಿದ್ದು, ಬಳಿಕ ಬೋನು ಹಾಕುವ ಮೂಲಕ ಹಿಡಿಯಲಾಗಿತ್ತು.
ಆದ್ರೆ, ಮತ್ತೆ ಗ್ರಾಮಗಳಿಗೆ ಚಿರತೆಗಳು ನುಗ್ಗುತ್ತಿದ್ದು, ಜನರಲ್ಲಿ ಭೀತಿ ಮತ್ತಷ್ಟು ಹೆಚ್ಚಾಗುವಂತೆ ಮಾಡಿದೆ. ನ್ಯಾಮತಿ ತಾಲೂಕಿನ ಫಲವನಹಳ್ಳಿಯಲ್ಲಿ ಚಿರತೆ ದಾಳಿಯಿಂದ ಮಹಿಳೆ ಸಾವನ್ನಪ್ಪಿದ್ದಾರೆ. ಈ ಬಳಿಕ ಚಿರತೆ ಸೆರೆಗೆ "ಆಪರೇಷನ್ ಡಾಗ್'' ಕಾರ್ಯಾಚರಣೆ ನಡೆಸಲಾಗುತ್ತಿದೆ.
ಚಿರತೆ ಹಿಡಿಯಲು ಅರಣ್ಯ ಇಲಾಖೆ ಬೋನು ಅಳವಡಿಕೆ ಮಾಡಿದೆ. ಬೋನಿನಲ್ಲಿ ಶ್ವಾನವನ್ನು ಇಟ್ಟು ಚಿರತೆ ಸೆರೆ ಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿ ಯೋಜನೆ ರೂಪಿಸಿದ್ದಾರೆ. 4 ತಂಡ ರಚಿಸಿರುವ ಅರಣ್ಯ ಇಲಾಖೆ ಕಾರ್ಯಾಚರಣೆ ಶುರು ಮಾಡಿದೆ.
ನ್ಯಾಮತಿ ಫಲವನಹಳ್ಳಿ ಗ್ರಾಮ ಸೇರಿ ಸುತ್ತಮುತ್ತಲಿನ ಗ್ರಾಮದ ಜನರಿಗೆ ಜಮೀನುಗಳಿಗೆ ಹೋಗದಂತೆ ಸೂಚನೆ ನೀಡಲಾಗಿದೆ. ಪಂಚಾಯತ್ ಸಿಬ್ಬಂದಿ ಮೂಲಕ ಜನರಿಗೆ ಮಾಹಿತಿ ನೀಡಲಾಗುತ್ತಿದೆ. ಚಿರತೆಗಳು ಹೆಚ್ಚಾಗಿದ್ದು, ಸೆರೆ ಹಿಡಿಯುವವರೆಗೆ ಯಾರೂ ಸಹ ಒಬ್ಬಂಟಿಯಾಗಿ ತಿರುಗಾಡಬೇಡಿ ಎಂಬ ಮಾಹಿತಿ ಕೊಡಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಹೊರಗೆ ಓಡಾಡದಂತೆ ಪಂಚಾಯತ್ ಮೂಲಕ ಪ್ರಕಟಣೆಯನ್ನೂ ಹೊರಡಿಸಲಾಗಿದೆ.
PublicNext
25/08/2022 07:37 pm