ಕೋಲಾರ:ಬೆಳೆ ನಷ್ಟ,ಮನೆ ಹಾನಿ,ಮೂಲಸೌಕರ್ಯ,ಮರು ನಿರ್ಮಾಣಕ್ಕೆ ಆದ್ಯತೆ ಕೊಡಲಾಗುವುದು.ತ್ವರಿತವಾಗಿ ಕೆಲಸ ಮಾಡಲು ಹಣ ಕೂಡ ಬಿಡುಗಡೆ ಮಾಡಲಾಗುವುದು.ಕೇವಲ 24 ಗಂಟೆ ಒಳಗಾಗಿ ಬಾಧಿತರಿಗೆ ನಷ್ಟ ಪರಿಹಾರ ತಲುಪಿಸಲು ಕ್ರಮಕೈಗೊಳ್ಳಾಗುವುದು ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ಕೋಲಾರದ ಅತಿವೃಷ್ಟಿಯಾದ ಭಾಗಗಳಿಗೆ ಇಂದು ಸಿಎಂ ಭೇಟಿಕೊಟ್ಟಿದ್ದಾರೆ. ಪರಿಶೀಲನೆಯನ್ನೂ ಮಾಡಿದ್ದಾರೆ. ಕೋಲಾರ ಜಿಲ್ಲೆಯಲ್ಲಿ 7 ಸಾವಿರ ಹೆಕ್ಟೇರ್ ತೋಟಗಾರಿಕೆ ಬೆಳೆ ನಾಶವಾಗಿವೆ. 48 ಸಾವಿರ ಹೆಕ್ಟೇರ್ ಕೃಷಿ ಪ್ರದೇಶದಲ್ಲಿ ಬೆಳೆ ನೆಲಕಚ್ಚಿದೆ ಎಂದು ವಿವರಣೆ ನೀಡಿದ್ದಾರೆ ಸಿಎಂ.
ಬೆಳೆ ನಷ್ಟ,ಮನೆ ಹಾನಿ, ಮೂಲಸೌಕರ್ಯ ಮರು ನಿರ್ಮಾಣಕ್ಕೆ ಆದತ್ಯೆ ಕೊಡಲಾಗುವುದು. ಇದಕ್ಕಾಗಿ ತ್ವರಿತವಾಗಿಯೇ ಕೆಲಸ ಮಾಡಲು ಹಣ ಕೂಡ ಬಿಡುಗಡೆ ಮಾಡಲಾಗುವುದು.ಇನ್ನು ಬಾಧಿತರಿಗೆ 24 ಗಂಟೆಯೊಳಗೆ ಪರಿಹಾರ ತಲುಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.
PublicNext
22/11/2021 04:03 pm