ಮಹಾರಾಷ್ಟ್ರ ಸೇರಿದಂತೆ ಉತ್ತರ ಕರ್ನಾಟಕ ಭಾಗದಲ್ಲಿ ಬೆಂಬಿಡದೆ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಯಾದಗಿರಿ ಜಿಲ್ಲೆಯ ಹುಣಸಗಿ ತಾಲ್ಲೂಕಿನ ನಾರಾಯಣಪುರ ಜಲಾಶಯ ಭರ್ತಿಯಾಗಿದ್ದು, ಒಂದು ಲಕ್ಷಕ್ಕೂ ಅಧಿಕ ಕ್ಯೂಸೆಕ್ ನೀರು ಕೃಷ್ಣ ನದಿಗೆ ಹರಿಬಿಡಲಾಗಿದೆ.
ನಾರಾಯಣಪುರ ಡ್ಯಾಂನ ನೀರಿನ ಮಟ್ಟ 491.30 ಮೀಟರ್ ಇದ್ದು, ಪ್ರಸ್ತುತ ನೀರಿನ ಶೇಖರಣೆಯು 29.06 ಟಿಎಂಸಿ ಯಾಗಿರುತ್ತದೆ. ಡ್ಯಾಂನ ಪೂರ್ಣ ಮಟ್ಟವು 492.25 ಮೀ ಆಗಿದ್ದು, 15 ಗೇಟ್ ಗಳ ಮೂಲಕ 1,11,990 ಸಾವಿರ ಕ್ಯೂಸೆಕ್ ನೀರು ಕೃಷ್ಣ ನದಿಗೆ ರಿಲೀಸ್ ಮಾಡಿದ್ದು, ನದಿ ದಂಡೆಯಲ್ಲಿ ಇರುವ ಗ್ರಾಮಸ್ಥರು ಎಚ್ಚರದಿಂದ ಇರಬೇಕೆಂದು ಜಿಲ್ಲಾಡಳಿತ ತಿಳಿಸಿದೆ.
ಇನ್ನು ತಿಂಥಣಿ ಗ್ರಾಮಕ್ಕೆ ಇಂದು ಭೇಟಿ ನೀಡಿದ ಸುರಪುರ ಶಾಸಕ ರಾಜುಗೌಡ ಅವರು, ಜಲಾಶಯಕ್ಕೆ ಹೆಚ್ಚಿನ ನೀರು ಹರಿದು ಬರುತ್ತಿದ್ದು, ನದಿಗಳೆಲ್ಲಾ ಅಪಾಯದ ಮಟ್ಟಮೀರಿ ಹರಿಯುತ್ತಿವೆ. ಜನ-ಜಾನುವಾರುಗಳು ನದಿ ತಟಕ್ಕೆ ಹೋಗಬಾರದು ಎಂದರು.
ಅಲ್ಲದೇ ಇನ್ನು ಎರಡು ದಿನಗಳ ಕಾಲ ಮಳೆಯಾಗುವ ಸಾಧ್ಯತೆಯಿದ್ದು , ಎಲ್ಲರೂ ಮುನ್ನೆಚ್ಚರಿಕೆಯಿಂದ ಇರಬೇಕು ಎಂದು ಜನರಿಗೆ ಮನವಿ ಮಾಡಿದರು.
ವರದಿ: ಮೌನೇಶ ಬಿ. ಮಂಗಿಹಾಳ, ಪಬ್ಲಿಕ್ ನೆಕ್ಸ್ಟ್ ಯಾದಗಿರಿ
PublicNext
13/07/2022 03:21 pm