ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗದಗ: ಕೆಸರಿನಲ್ಲಿ ಬೆಳೆ ವೀಕ್ಷಿಸಿದ್ದ ಸಚಿವ ಬಿ.ಸಿ ಪಾಟೀಲ್..!

ನಿರಂತರವಾಗಿ ಸುರಿದ ಮಳೆಯಿಂದ ರೈತರ ಬೆಳೆಗಳು ಹಾನಿಯಾಗಿರುವ ಹಿನ್ನಲೆಯಲ್ಲಿ ಗದಗ ಜಿಲ್ಲೆಯಲ್ಲಿ ಕೃಷಿ ಇಲಾಖೆ ಸಚಿವ ಬಿ.ಸಿ ಪಾಟೀಲ್ ಅವರು ಬೆಳೆ ಹಾನಿ ವೀಕ್ಷಣೆ ಮಾಡಿದ್ದರು. ಹೌದು ಗದಗ ತಾಲೂಕಿನ ಹೊಂಬಳ, ಎಚ್ ಎಸ್ ವೆಂಕಟಾಪೂರ ಹಾಗೂ ನರಗುಂದ ತಾಲೂಕಿನ ಕುರ್ಲಗೇರಿ ಗ್ರಾಮದಲ್ಲಿ ಹೆಸರು, ಉದ್ದು, ಗೋವಿನಜೋಳದ, ಶೇಂಗಾ ಸೇರಿದಂತೆ ಅನೇಕ ಬೆಳೆ ಹಾನಿ ವೀಕ್ಷಿಸಿದರು.

ಸಚಿವ ಬಿಸಿ ಪಾಟೀಲರು ಜಮೀನುಗಳಲ್ಲಿ ಕಸರಲ್ಲಿ ನಡೆದು ಹೆಸರು ಬೆಳೆ ಹಾನಿ ವೀಕ್ಷಿಸಿದರು. ಕೆಸರಿದೆ ಸರ್ ಅಂತ ಕಾರ್ಯಕರ್ತ ಹೇಳಿದರೂ ಲೆಕ್ಕಿಸದ ಸಚಿವರು ಮುಳ್ಳು ಕಂಟಿ ಸರಿಸಿಕೊಂಡು ಬೆಳೆ ಹಾನಿ ವೀಕ್ಷಿಸಿದರು. ಕೆಸರಿನಲ್ಲಿ ಸಚಿವರು ರೈತರ ಕೈ ಹಿಡಿದು ಬೆಳೆ ಹಾನಿಯಾದ ಬೆಳೆಗಳನ್ನು ನೋಡಿದ್ದರು.

ಇದೇ ವೇಳೆ ರೈತರು ರಸಗೊಬ್ಬರ ಕೊರತೆಯ ಬಗ್ಗೆ ಕೃಷಿ ಇಲಾಖೆ ಸಚಿವರ ಮುಂದೆ ಗೋಳು ತೋಡಿಕೊಂಡ್ರು. ಮುಂಗಾರು ಬೆಳೆಗೆ ಡಿಎಪಿ ರಸಗೊಬ್ಬರ ಸಿಕ್ಕಿಲ್ಲ ಸಾಹೇಬರ ಬಹಳ ಸಮಸ್ಯೆ ಆಗಿದೆ. ಮೆಣಸಿನಕಾಯಿ ಬೆಳೆಗೆ ಡಿಎಪಿ ಗೊಬ್ಬರ ಸಿಗ್ತಿಲ್ರಿ. ಪೊಟ್ಯಾಸಿಯಂ ಗೊಬ್ಬರಕ್ಕೆ ಕಳೆದ ವರ್ಷಕ್ಕಿಂತ ಈ ಬಾರಿ ಬೆಲೆ ದುಬಾರಿಯಾಗಿದೆ.

ಕಳೆದ ವರ್ಷ 900 ರೂ. ಇತ್ತು ಈಗ 1700 ರೂ ಆಗಿದೆ.ಬೆಳೆ ಹಾನಿಯಾಗಿ ಲಾಸ್ ಆಗಿದ್ದೇವೆ, ರೈತರಿಗೆ ಬಹಳ ಸಂಕಷ್ಟ ಆಗಿದೆ.ಹೀಗಾಗಿ ಸಾಲ ಮನ್ನಾ ಮಾಡಿಸಿ ಅಂತ ರೈತರ ಒತ್ತಾಯಿಸಿದರು. ಚಾಲ್ತಿ ಸಾಲದವರಿಗೆ ಅನ್ಯಾಯ ಆಗಿದೆ, ನಾವು ಎಲ್ಲೋ ಬಡ್ಡಿ ತಂದು ಕಟ್ಟಿದ್ದೇವೆ.ಕಳೆದ ವರ್ಷ ಮೆಣಸಿನಕಾಯಿಯನ್ನ ಕೇವಲ 100 ರೂ ಕ್ವಿಂಟಲ್ ಗೆ ಮಾರಿದೆ.

ಹೀಗಾಗಿ ಎಲ್ಲಾ ಸಾಲನೂ ಮೈಮೇಲೆ ಬಿತ್ತು. ರೈತರು ಆತ್ಮಹತ್ಯೆ ಮಾಡಿಕೊಳ್ಳೋದಕ್ಕೆ ಕಾರಣನೇ ಇವು ಅಂತ ಸಚಿವ ಬಿ.ಸಿ ಪಾಟೀಲ್ ಎದರು ರೈತರು ತಮ್ಮ ನೋವನ್ನು ತೊಡಗಿಕೊಂಡರು.

Edited By :
PublicNext

PublicNext

09/08/2022 08:29 pm

Cinque Terre

86.82 K

Cinque Terre

1