ಗದಗ: ಜಿಲ್ಲೆಯು ಸೇರಿದಂತೆ ತಾಲೂಕು ವ್ಯಾಪ್ತಿಯಲ್ಲಿ ಅಪಾರ ಬೆಳೆ ನಷ್ಟ ಉಂಟಾಗಿರುವ ವರದಿ ಹಿನ್ನೆಲೆ ರಾಜ್ಯ ಮಟ್ಟದ ಅಧಿಕಾರಿಗಳ ತಂಡವು ತಾಲೂಕಾ ಮಟ್ಟದ ಅಧಿಕಾರಿಗಳೊಂದಿಗೆ ತಾಲೂಕಿನ ವಿವಿಧ ಗ್ರಾಮಗಳ ರೈತರ ಜಮೀನುಗಳಿಗೆ ಭೇಟಿ ನೀಡಿ ಬೆಳೆಹಾನಿ ಪರಿಶೀಲಿಸಿದರು.
ಕೃಷಿ ಇಲಾಖೆ ಕೇಂದ್ರ ಕಚೇರಿಯ ಉಪ ಕೃಷಿ ನಿರ್ದೇಶಕ ಅಶೋಕ ಅವರ ನೇತೃತ್ವದ ತಂಡ ಲಕ್ಷ್ಮೇಶ್ವರ ತಾಲೂಕಿನ ಗೊಜನೂರ ಅಕ್ಕಿಗುಂದ ಶೆಟ್ಟಿಕೆರಿ ಬಟ್ಟೂರ ಪು.ಬಡ್ನಿ ಹಿರೇಮಲ್ಲಾಪೂರ ಹರದಗಟ್ಟಿ ಅಡರಕಟ್ಟಿ ಗ್ರಾಮಗಳಲ್ಲಿ ಬೆಳೆ ಹಾನಿ ಸಮೀಕ್ಷೆ ನಡೆಸಿ ಮಾಹಿತಿ ಕಲೆಹಾಕಿದರು.
ಈ ವೇಳೆ ಮಾಹಿತಿ ನೀಡಿದ ಉಪ ಕೃಷಿ ನಿರ್ದೇಶಕ ಅಶೋಕ ಜಿಲ್ಲೆಯಲ್ಲಿನ ಎಲ್ಲ ತಾಲೂಕಿಗಳಿಗೆ ತಂಡವನ್ನು ರಚಿಸಿ ಸಮೀಕ್ಷಾ ಕಾರ್ಯವನ್ನು ಕೈಗೊಳ್ಳಲಾಗಿದೆ. ಬಹುತೇಕ ಬೆಳೆಗಳು ಮಳೆಯಿಂದ ಹಾನಿಗೀಡಾಗಿರುವುದು ಕಂಡು ಬಂದಿದೆ.
ಲಕ್ಷ್ಮೇಶ್ವರ ತಾಲೂಕಿನಲ್ಲಿ ಗೋವಿನಜೊಳ 7480 ಹೇಕ್ಟರ್ ಹೆಸರು 3430 ಹೇಕ್ಟರ್ ಹತ್ತಿ 1260 ಹೇಕ್ಟರ್ ಶೇಂಗಾ 415 ಹೇಕ್ಟರ್ ಒಟ್ಟು 12585 ಹೇಕ್ಟರ್ ಮಳೆಯಿಂದ ಹಾನಿಯಾಗಿದೆ ಎಂದು ತಿಳಿಸಿದರು.
PublicNext
11/08/2022 12:53 pm