ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗದಗ : ಕೊನೆಗೂ ಶವವಾಗಿ ಪತ್ತೆಯಾದ ಮಹೇಶ್; ಜೊತೆಯಾಗಿ ಇಹಲೋಕ ತ್ಯಜಿಸಿದ ಪೊಲೀಸ್ ಸ್ನೇಹಿತರು!

ಗದಗ : ಹಳ್ಳದ ಸೆಳವುನಲ್ಲಿ ಕೊಚ್ಚಿ ಹೋಗಿದ್ದ ಮತ್ತೊಬ್ಬ ಪೊಲೀಸ್ ಮಹೇಶ್ ವಕ್ರದ ಕೊನೆಗೂ ಶವವಾಗಿ ಪತ್ತೆಯಾಗಿದ್ದಾನೆ. ಯಲಬುರ್ಗಾ ತಾಲೂಕಿನ ಸಂಗನಾಳ ಬಳಿ ಇರುವ ಸೇತುವೆ ಕೆಳಗೆ ಮಹೇಶ್ ವಕ್ರದನ ಶವ ಸಿಕ್ಕಿದೆ.‌ ನಿನ್ನೆಯಿಂದಲೂ ಕೊಪ್ಪಳ ಜಿಲ್ಲೆಯ ಪೊಲೀಸರು, ಗದಗ ಜಿಲ್ಲೆಯ ಪೊಲೀಸರು ಶೋಧ ಕಾರ್ಯಾಚರಣೆ ನಡೆಸಿದ್ದರು.

ನಿನ್ನೆಯಿಂದ ಗದಗ ಎಸ್ಪಿ ಶಿವಪ್ರಕಾಶ್ ದೇವರಾಜು ಖುದ್ದು ಕಾರ್ಯಾಚರಣೆ ಸ್ಥಳದಲ್ಲಿಯೇ ಇದ್ದರು. ಸೋಮವಾರ ಗದಗ ಜಿಲ್ಲೆಯ ಗಜೇಂದ್ರಗಡದಲ್ಲಿ ನಡೆದ ಪ್ರತಿಭಟನೆಯ ಬಂದೋಬಸ್ತ್ ಗೆ ತೆರಳಿದ್ದ ಮುಂಡರಗಿ ಠಾಣೆಯ ನಿಂಗಪ್ಪ ಹಲವಾಗಲಿ ಹಾಗೂ ಮಹೇಶ್

ವಕ್ರದ ಕರ್ತವ್ಯ ಮುಗಿಸಿಕೊಂಡು ಮುಂಡರಗಿಗೆ ವಾಪಾಸು ಬರುವಾಗ ಕೊಪ್ಪಳ ಜಿಲ್ಲೆಯ ತೊಂಡಿಹಾಳ-ಬಂಡಿಹಾಳ ಗ್ರಾಮದ ಹತ್ತಿರದ ಹೊಸಹಳ್ಳದಲ್ಲಿ ಬೈಕ್ ಸಮೇತ ಇಬ್ಬರು ಕೊಚ್ಚಿಹೋಗಿದ್ದರು. ಮೃತಪಟ್ಟ ಇಬ್ಬರೂ ಪೇದೆಗಳು 2016ರಲ್ಲಿ ಪೊಲೀಸ್ ಇಲಾಖೆಗೆ ಸೇರಿದ್ದರು. ಜೊತೆಯಾಗಿಯೇ ಇಹಲೋಕ ತ್ಯಜಿಸಿದ್ದು ದೊಡ್ಡ ದುರಂತ.

Edited By : Abhishek Kamoji
PublicNext

PublicNext

07/09/2022 02:52 pm

Cinque Terre

47.02 K

Cinque Terre

0

ಸಂಬಂಧಿತ ಸುದ್ದಿ