ಬೆಂಗಳೂರು : ದೇಶದಲ್ಲಿ ಕರ್ನಾಟಕ ಅತೀ ಹೆಚ್ಚು ಚಿರತೆ ವಾಸ ಸ್ಥಳ ಎಂಬ ಪಟ್ಟಿಯಲ್ಲಿ 2 ಡನೇ ಸ್ಥಾನದಲ್ಲಿದೆ.
ದೆಹಲಿಯಲ್ಲಿ ಸೋಮವಾರ 2018ರ ಅಂತ್ಯಕ್ಕೆ ಪೂರ್ಣಗೊಂಡ ಚಿರತೆ ಗಣತಿ ವರದಿಯನ್ನು ಕೇಂದ್ರ ಪರಿಸರ ಸಚಿವ ಪ್ರಕಾಶ್ ಜಾವಡೇಕರ್ ಬಿಡುಗಡೆ ಮಾಡಿದರು.
ಹುಲಿ ಮತ್ತು ಸಿಂಹಗಳಂತೆ ಚಿರತೆ ಕೂಡ ಪರಿಸರ ಸಮತೋಲನ ಕಾಪಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.
ಹೀಗಾಗಿ, ಕ್ಯಾಮೆರಾ ಟ್ರಾಯಪಿಂಗ್ ಮೂಲಕ ಮಾಡಿದ ಚಿರತೆ ಗಣತಿ ನಡೆಸಲಾಗಿತ್ತು.
2014ರಲ್ಲಿ ಸುಮಾರು 8 ಸಾವಿರ ಇದ್ದ ಚಿರತೆಗಳ ಸಂಖ್ಯೆ 2018ರ ವೇಳೆಗೆ 12,852ಕ್ಕೆ ಏರಿಕೆಯಾಗಿದೆ ಎಂದು ಮಾಹಿತಿ ನೀಡಿದರು.
ದೇಶದಲ್ಲಿ ಅತಿ ಹೆಚ್ಚು ಚಿರತೆ ಹೊಂದಿದ ರಾಜ್ಯಗಳಲ್ಲಿ ಮಧ್ಯಪ್ರದೇಶ (3,421), ಕರ್ನಾಟಕ (1,783) ಮತ್ತು ಮಹಾರಾಷ್ಟ್ರ (1,690) ಮುಂಚೂಣಿಯಲ್ಲಿವೆ.
ಇತ್ತೀಚೆಗೆ, ಬೇಟೆಯಾಡುವುದು, ಆವಾಸಸ್ಥಾನ ನಷ್ಟ, ನೈಸರ್ಗಿಕ ಬೇಟೆ, ಸವಕಳಿ ಮತ್ತು ಸಂಘರ್ಷಗಳು ಚಿರತೆಗಳ ಜೀವಕ್ಕೆ ಉರುಳಾಗಿ ಪರಿಣಮಿಸಿವೆ.
ಪ್ರಾದೇಶಿಕ ವಿಭಾಗವಾರು ಚಿರತೆಗಳ ಸಂಖ್ಯೆ: ಮಧ್ಯ ಭಾರತ ಮತ್ತು ಪೂರ್ವ ಘಟ್ಟಗಳ ಮಧ್ಯಪ್ರದೇಶ, ಮಹಾರಾಷ್ಟ್ರ, ರಾಜಸ್ಥಾನ, ಒಡಿಶಾ, ಛತ್ತೀಸ್ಘಡ, ಜಾರ್ಖಂಡ್, ತೆಲಂಗಾಣ ಮತ್ತು ಆಂಧ್ರಪ್ರದೇಶಗಳಲ್ಲಿ ಅತಿ ಹೆಚ್ಚು 8,071 ಚಿರತೆಗಳು ಕಂಡುಬಂದಿವೆ.
ಪಶ್ಚಿಮ ಘಟ್ಟ ಪ್ರದೇಶಗಳಾದ ಕರ್ನಾಟಕ, ತಮಿಳುನಾಡು, ಗೋವಾ, ಕೇರಳದಲ್ಲಿ 3,387 ಚಿರತೆಗಳಿವೆ. ಶಿವಾಲಿಕ್, ಗಂಗಾ ಬಯಲು ಪ್ರದೇಶಗಳಾದ ಉ.ಪ್ರದೇಶ, ಉತ್ತರಾಖಂಡ ಮತ್ತು ಬಿಹಾರಗಳಲ್ಲಿ 1,253, ಈಶಾನ್ಯ ಬೆಟ್ಟಗಳಲ್ಲಿ 141 ಚಿರತೆಗಳಿವೆ ಎಂದು ಸಚಿವ ಪ್ರಕಾಶ್ ಜಾವಡೇಕರ್ ತಿಳಿಸಿದರು.
PublicNext
22/12/2020 08:01 am