ಇದು ಜೀವ ಪರಿಸರ ವ್ಯವಸ್ಥೆ. ಇಲ್ಲಿ ವನ್ಯ ಜೀವಿಗಳು ಒಂದನ್ನೊಂದು ತಿಂದು ಬದುಕುತ್ತವೆ. ಮಾಂಸಾಹಾರಿ ಪ್ರಾಣಿಗಳು ಸಾಧು ಪ್ರಾಣಿಗಳನ್ನು ಹೊಡೆದು ಕೊಂದು ತಿನ್ನುತ್ತವೆ. ಅದು ಆಹಾರ ಸರಪಳಿ. ಮಾಂಸಾಹಾರಿ ಪ್ರಾಣಿಗಳು ಇತರ ಚಿಕ್ಕ ಪುಟ್ಟ ಪ್ರಾಣಿಗಳನ್ನು ತಿನ್ನುವುದು ಅನಿವಾರ್ಯ. ಇಲ್ಲದಿದ್ರೆ ಅವು ಬದುಕಲಾರವು. ಚಿರತೆಯೊಂದು ನಡುರೋಡಲ್ಲಿ ಜಿಂಕೆ ಮರಿಯ ಕತ್ತು ಹಿಡಿದು ಎಳೆದೊಯ್ಯುತ್ತಿರುವ ಈ ವಿಡಿಯೋವನ್ನ ನೋಡಿದ ನೆಟ್ಟಿಗರು ಮರುಕ ಪಟ್ಟಿದ್ದಾರೆ. ಮುಂದೆ ರಸ್ತೆ ಪಕ್ಕದಲ್ಲಿ ಜಿಂಕೆ ಮರಿಯನ್ನು ಚಿರತೆ ಎಳೆದೊಯ್ದಿದೆ. ಅಲ್ಲಿ ಬಂದ ಇನ್ನೊಂದು ಚಿರತೆ ಜಿಂಕೆಯ ಕಾಲನ್ನು ಹಿಡಿದು ತನ್ನ ಕಡೆ ಎಳೆದಾಡಿದೆ. ಮುಂದೆ ಏನಾಗುತ್ತೆ ಅಂತ ನಿಮಗೆ ಗೊತ್ತಲ್ಲ?
PublicNext
18/12/2020 11:04 am