ನವದೆಹಲಿ : ಚಳಿ.. ಚಳಿ.. ಚಳಿ... ಚಳಿ.. ತಾಳಲಾರದ ಚಳಿ ಈ ಬಾರಿಯ ಮೈ ಕೊರೆಯುವ ಚಳಿಗೆ ಜನ ನಡಗುತ್ತಿದ್ದಾರೆ.
ಬೆಂಗಳೂರಿನಂಥ ನಗರಗಳನ್ನ ಸದ್ಯಕ್ಕೆ ಚಳಿಯ ತೀವ್ರತೆ ಅಷ್ಟಾಗಿ ಕಾಣಿಸುತ್ತಿಲ್ಲ.
ಆದ್ರೆ ರಾಷ್ಟ್ರರಾಜಧಾನಿ ದೆಹಲಿಯಲ್ಲಿ ವಿಪರೀತ ಚಳಿ ಇದ್ದು, ಇಂದು ಅಲ್ಲಿನ ಕನಿಷ್ಠ ತಾಪಮಾನ 6.9 ಡಿಗ್ರಿ ಸೆಲ್ಶಿಯಸ್ ಗೆ ಕುಸಿದಿದೆ.
ಇದು 2003 ರಿಂದ ಇಚೆಗೆ ನವೆಂಬರ್ ನಲ್ಲಿ ದಾಖಲಾದ ಅತೀ ಕಡಿಮೆ ತಾಪಮಾನ ಎಂದು ವರದಿಯಾಗಿದೆ.
ಶುಕ್ರವಾರದಂದು ದೆಹಲಿಯಲ್ಲಿ 7.5 ಡಿಗ್ರಿ ಸೆಲ್ಶಿಯಸ್ ನ ಕನಿಷ್ಠ ತಾಪಮಾನ ದಾಖಲಾಗಿತ್ತು.
ಇದು ಕಳೆದ 14 ವರ್ಷಗಳಲ್ಲೇ ನವೆಂಬರ್ ನಲ್ಲಿ ದಾಖಲಾದ ಅತೀ ಕಡಿಮೆ ಉಷ್ಣಾಂಶ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ.
ಕಳೆದ 3 ವರ್ಷಗಳಲ್ಲಿ ನವೆಂಬರ್ ನಲ್ಲಿ ದಾಖಲಾದ ಅತೀ ಕಡಿಮೆ ಉಷ್ಣಾಂಶ
• 2019- ಕನಿಷ್ಠ 11.5 ಡಿಗ್ರಿ ಸೆಲ್ಶಿಯಸ್
• 2018- 10.5 ಡಿಗ್ರಿ ಸೆಲ್ಶಿಯಸ್
• 2017- 7.6 ಡಿಗ್ರಿ ಸೆಲ್ಶಿಯಸ್
ಇನ್ನು ಈವರೆಗೆ ದೆಹಲಿಯಲ್ಲಿ ನವೆಂಬರ್ ತಿಂಗಳ ಅತ್ಯಂತ ಕಡಿಮೆ ತಾಪಮಾನದ ಸಾರ್ವಕಾಲಿಕ ದಾಖಲೆ 1938 ರಲ್ಲಿ
ಆ ವರ್ಷ ನವೆಂಬರ್ 28ರಂದು ದೆಹಲಿಯಲ್ಲಿ ದಾಖಲಾದ ಕನಿಷ್ಠ ತಾಪಮಾನ 3.9 ಡಿಗ್ರಿ ಸೆಲ್ಶಿಯಸ್.
PublicNext
23/11/2020 11:38 am