ಏ ಮಂಗನಾಟ ಆಡ್ಬೇಡ , ಸುಮ್ಮನಿರು. ಹೀಗಂತ ನಮ್ಮ ಮಲೆನಾಡು ಭಾಗದಲ್ಲಿ ಮಕ್ಕಳಿಗೆ ಬಯ್ಯಲಾಗುತ್ತೆ. ನಿಜಕ್ಕೂ ಕಪಿ ಚೇಷ್ಟೆ ಸದಾಕಾಲದ ಉಚಿತ ಮನೋರಂಜನೆ ಇದ್ದಂತೆ. ಇದಕ್ಕೆ ಬೆಸ್ಟ್ ಉದಾಹರಣೆ ಎಂಬಂತೆ ಸೋಶಿಯಲ್ ಮೀಡಿಯಾದಲ್ಲಿ ಒಂದು ವಿಡಿಯೋ ವೈರಲ್ ಆಗಿದೆ. ನಡೆದುಕೊಂಡು ಬಂದ ಕೋತಿಯೊಂದು ಮರದ ದಿಮ್ಮಿ ಮೇಲೆ ಲಗಾಟಿ ಹೊಡೆದಿದೆ. ನೋಡುವವರಿಗೆ ಇದು ಸರ್ಕಸ್ ಕಂಡಂತೆ ಕಂಡಿದೆ. ಸದ್ಯ ಈ ವಿಡಿಯೋ ಟ್ವಿಟ್ಟರ್ ಮಂದಿಗೆ ಸಖತ್ ಎಂಟರ್ ಟೇನ್ ಮೆಂಟ್ ಕೊಟ್ಟಿದೆ.
ಆದ್ರೆ ಇದು ನಿಜಕ್ಕೂ ಕೋತಿ ಹೀಗೆ ಸ್ವಾಭಾವಿಕವಾಗಿ ಮಾಡಿದ್ದಾ? ಅಥವಾ ಯಾರೋ ಹೀಗೆ ಮಾಡಿದ್ದಾ ಅನ್ನೋದು ಗೊತ್ತಾಗಿಲ್ಲ. ಕೋತಿಯ ಹಾವ ಭಾವ ಹಾಗೂ ಲಗಾಟಿ ಹೊಡೆದ ನಂತರ ಮರದ ದಿಮ್ಮಿಯನ್ನು ಗಟ್ಟಿಯಾಗಿ ಹಿಡಿಕೊಳ್ಳೋದನ್ನ ನೋಡಿ ಅನೇಕರು ಇದು ಗ್ರಾಫಿಕ್ ಅಲ್ಲ. ಕೋತಿಯೇ ಹೀಗೆ ಸರ್ಕಸ್ ಮಾಡಿದ್ದು ಎಂದು ವಾದಿಸುತ್ತಿದ್ದಾರೆ. ಏನೇ ಆಗಲಿ ಸದ್ಯ ಈ ವಿಡಿಯೋ ಎಲ್ಲ ಕಡೆ ಶೇರ್ ಆಗ್ತಾ ಇದೆ. ನೀವೂ ಮತ್ತೆ ಮತ್ತೆ ನೋಡಿ..ಎಂಜಾಯ್ ಮಾಡಿ
PublicNext
21/11/2020 05:14 pm