ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಈ ದೇಶದಲ್ಲಿ ಮಕ್ಕಳಿಗೆ ಹೊಡೆಯೋ ಹಾಗಿಲ್ಲ, ಮಕ್ಕಳ ಹಕ್ಕಿಗೆ ಗೌರವ ಕೊಡ್ಬೇಕಂತೆ

ಅಯ್ಯೋ ನಮ್ಮನೆ ಮಕ್ಳು ತಪ್ಪು ಮಾಡಿದ್ರೇ ನಾವು ಹೊಡಿಬಾರ್ದಾ, ಬುದ್ಧಿ ಹೇಳ್ಬಾರ್ದ್, ತರ್ಲೇ ಮಾಡೋ ಮಕ್ಕಳನ್ನ ಸರಿಯಾದ ದಾರಿಗೆ ತರಲೇಬಾರ್ದಾ ಎಂಬ ಪ್ರಶ್ನೇಗಳಿಗೆ ಇನ್ಮುಂದೆ ಉತ್ತರ ಹೌದು ! ಹೊಡೆಯಲೇ ಬಾರದು ಇದೇನಪ್ಪಾ ಕಥೆ ಅಂದ್ರಾ.

ಯುನೈಟೆಡ್ ಕಿಂಗ್ಡಮ್ ನ ಸ್ಕಾಟ್ಲ್ಯಾಂಡ್, ದೇಶದಲ್ಲಿ ಹೆತ್ತವರು ಮಕ್ಕಳ ಮೇಲೆ ಕೈ ಮಾಡುವುದನ್ನ ನಿಷೇಧಿಸಿ ಆದೇಶ ಹೊರಡಿಸಿದೆ. ಈ ನಿಯಮ ಜಾರಿಗೊಳಿಸಿದ ಮೊದಲ ದೇಶ ಸ್ಕಾಟ್ಲ್ಯಾಂಡ್ ವಿಶ್ವದಲ್ಲೇ ಈ ರೂಲ್ಸ್ ಜಾರಿಗೆ ತಂದ ಸ್ಕಾಟ್ಲ್ಯಾಂಡ್ ಯುನೈಟೆಡ್ ಕಿಂಗ್ಡಮ್ ನ 58ನೇ ದೇಶವಾಗಿದೆ. ಈ ಮೊದಲು 1979ರಲ್ಲಿ ಸ್ವೀಡನ್ ದೇಶ ಈ ನಿಯಮವನ್ನು ಜಾರಿಗೆ ತಂದಿತ್ತು.

ಮಕ್ಕಳ ಹಕ್ಕುಗಳು ಪ್ರತಿಯೊಬ್ಬರು ಸಂಪೂರ್ಣವಾಗಿ ಗೌರವಿಸಿ ಮಕ್ಕಳ ಮೇಲಾಗುವ ಕೌರ್ಯ ತಡೆಯುವಂತೆ ಸ್ಕಾಟ್ಲ್ಯಾಂಡ್ ರಾಷ್ಟ್ರೀಯ ಆಡಳಿತ ಮಂಡಳಿ ಹೇಳಿದೆ.

ಅಂದಹಾಗೇ ಈ ಕ್ರಮವನ್ನು ಎಲ್ಲರೂ ಜಾರಿಗೆ ತಂದ ಕೂಡ್ಲೇ ಒಪ್ಪಿದ್ರು, ಅನ್ಕೋಂಡ್ರಾ ಇಲ್ಲಾ ಸ್ವಾಮಿ ಅಲ್ಲಿನ ಜನತೆ ಸಹ ಈ ಬಗ್ಗೆ ಚಕಾರ ಎತ್ತಿದ್ರೂ ಸಹ ಭಿನ್ನಮತದಲ್ಲಿ ಕಾಯ್ದೆ ಜಾರಿಗೆ ಬಂದಿದೆ.

ಅಬ್ಬಾ ! ಇಂತಹದೊಂದು ನಿಯಮ ಭಾರತದೇಶದಲ್ಲಿ ಜಾರಿಗೆ ಬಂದ್ರೇ ಹೇಗಿರುತ್ತೆ ? ಜನರು ಎಸ್ ಅಂತಾರಾ, ವಿರೋಧ ಮಾಡ್ತಾರಾ, ಎಂಬ ಕುತೂಹಲ ಇದೆಯಲ್ಲಾ. ಅದೇನೆರಲಿ ಭಾರತೀಯ ಸಂಸ್ಕೃತಿ ನಮ್ಮ ಸಂಸ್ಕೃತಿ ನಮಗೆ ಮೇಲು ಪಾಶ್ಚಿತ್ಯೀಕರಣ ಸಲ್ಲದು.

Edited By :
PublicNext

PublicNext

21/11/2020 02:50 pm

Cinque Terre

50.28 K

Cinque Terre

0

ಸಂಬಂಧಿತ ಸುದ್ದಿ