ನಾಯಿಯೊಂದು ಪುಟ್ಟ ಕಂದಮ್ಮನಿಗೆ ಅಂಬೆಗಾಲು ಹಾಕುವುದನ್ನು ಕಲಿಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ವಿಡಿಯೋವನ್ನು ಸೈಮನ್ ಬಿಆರ್ಎಫ್‌ಸಿ ಹಾಪ್ಕಿನ್ಸ್ ಟ್ವೀಟ್ ಮಾಡಿದ್ದು, 'ನಾಯಿ ಮಗುವಿಗೆ ನಡೆಯಲು ಸಾಧ್ಯವಿಲ್ಲ ಎಂದು ಅರಿತುಕೊಂಡು ಮಗುವಿಗೆ ಹೇಗೆ ಅಂಬೆಗಾಲು ಹಾಕಬೇಕು ಎಂದು ಕಲಿಸಲಿಸಿದೆ ಎನ್ನುವಂತೆ ಕಾಣುತ್ತದೆ' ಎಂಬ ಶೀರ್ಷಿಕೆ ನೀಡಿದೆ.
ಈ ವಿಡಿಯೋದಲ್ಲಿ ಪುಟ್ಟ ಕಂದಮ್ಮ ನೆಲದ ಮೇಲೆ ಮುಂದೆ ಸಾಗಲು ಆಗದೆ ಆಟಿಕೆಗಳೊಂದಿಗೆ ಆಟವಾಡುತ್ತಿರುತ್ತದೆ. ಈ ವೇಳೆ ಬಂದ ಸಾಕು ನಾಯಿ ಮೊದಲು ಮಗುವನ್ನು ನೋಡುತ್ತದೆ. ಮಗುವಿಗೆ ಮುಂದೆ ಹೋಗಲು ಸಾಧ್ಯವಿಲ್ಲ ಎಂದು ಅರಿತು ಮಗುವಿನ ಬಳಿಯಲ್ಲೇ ಮಲಗಿ ತೆವಳುತ್ತಾ ಮುಂದೆ ಹೋಗುತ್ತದೆ. ಇದನ್ನು ಗಮನಿಸಿದ ಮಗು ಕೂಡ ನಾಯಿ ಹಾಗೇ ತೆವಳುತ್ತಾ ಅಂಬೆಗಾಲು ಇಟ್ಟು ಮುಂದೆ ಸಾಗುತ್ತದೆ.
ನಾಯಿಯ ಪಾಠಕ್ಕೆ ನೆಟ್ಟಿಗರು ನೋಡಿ ಫುಲ್ ಫಿದಾ ಆಗಿದ್ದು, ತಮ್ಮದೆ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
PublicNext
12/11/2020 05:14 pm