ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಾನವೀಯತೆ ಪಾಠ ಕಲಿಸಿದ ಚಿರತೆ...!

ಮುಗ್ಧ ಮಗುವಿನ ಮುಖ ನೋಡಿದ್ರೆ ಕಠೋರ ಹೃದಯವರು ಕೂಡ ಮಂಜುಡ್ಡೆ ಕರಗಿದಂತೆ ಕರಗಿ ಹೋಗ್ತಾರೆ.ಅಂತಹ ಅಗಾಧ ಶಕ್ತಿ ಮುಗ್ಧ ಮಗುವಿನ ಮುಖದಲ್ಲಿರುತ್ತೆ. ನೀವೀಗ ನೋಡ್ತಾ ಇರುವ ಈ ದೃಶ್ಯ ಈಗಾಗಲೇ ನೆಟ್ಟಿಗರ ಭಾರೀ ಮೆಚ್ಚುಗೆ ಗಳಿಸಿದೆ. ಜಿಂಕೆಯೊಂದು ಹೆರಿಗೆ ಆಗುವ ಸಂದರ್ಭದಲ್ಲಿ ತನ್ನ ಮೇಲೆ ಚಿರತೆಯೊಂದು ದಾಳಿ ಮಾಡಿದೆ.

ದಾಳಿ ಮಾಡಿದ ಕ್ಷಣಾರ್ಧದಲ್ಲೇ ಜಿಂಕೆ ತಪ್ಪಿಸಿಕೊಂಡಿದೆ. ಆದ್ರೆ ಜಿಂಕೆಯ ನವಜಾತ ಕಂದ ಅಲ್ಲೇ ಮಲಗಿತ್ತು. ಅದನ್ನ ಕಂಡ ಚಿರತೆ ಜಿಂಕೆ ಮರಿ ಮೇಲೆ ಕ್ರೂರತೆ ತೋರದೇ ಮಮತೆ ತೋರಿದೆ. ಅದನ್ನ ಎತ್ತಿಕೊಂಡು ಸುರಕ್ಷಿತ ಜಾಗದಲ್ಲಿಟ್ಟ ಚಿರತೆ ಆ ಜಿಂಕೆ ಮರಿಯನ್ನ ತಾನೇ ಸಾಕಿ ಸಲುಹಿದೆ.ಈಗ ಚಿರತೆಯ ಸಲಹುವಿಕೆಯಲ್ಲೇ ಜಿಂಕೆ ಮರಿ ಬೆಳೆದಿದೆ. ದಿನವೂ ತಾಯಿಯಲ್ಲದ ತಾಯಿ ಚಿರತೆಯೊಡನೆ ಕಾಲ ಕಳೆಯುತ್ತಿದೆ. ಈಗ ಈ ವಿಡಿಯೋ ಸಖತ್ ವೈರಲ್ ಆಗಿದ್ದು ನೆಟ್ಟಿಗರಿಗೆ ಮಾನವೀಯತೆಯ ಪಾಠ ಕಲಿಸಿದೆ. ಅದಕ್ಕೆ ಹೇಳೋದು ಕಣ್ರೀ ಜೊತೆಗಿದ್ದವರು ಮೋಸ ಮಾಡಿದರೂ ಮಾತೃವತ್ಸಲ್ಯ ಎಂದೂ ಮೋಸ ಮಾಡಲು ಸಾಧ್ಯವಿಲ್ಲ ಎಂದು.

Edited By : Manjunath H D
PublicNext

PublicNext

08/11/2020 11:24 am

Cinque Terre

89.85 K

Cinque Terre

19

ಸಂಬಂಧಿತ ಸುದ್ದಿ