ಗದಗ: ಗದಗ ಜಿಲ್ಲೆಯಲ್ಲಿ ನಿನ್ನೆ ರಾತ್ರಿ ಸುರಿದ ಧಾರಾಕಾರ ಮಳೆ ಅನ್ನದಾತನ ಬದುಕನ್ನೇ ಕಸಿದುಕೊಂಡಿದೆ. ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಹಲವು ಗ್ರಾಮಗಳಲ್ಲಿ ರೈತರು ಬೆಳೆದ ಬೆಳೆಗಳನ್ನ ನೀರುಪಾಲು ಮಾಡಿದೆ.
ಮುಕ್ತುಂಪುರ ಗ್ರಾಮದಲ್ಲಿ ಹರಿಯುತ್ತಿರೋ ಚಿಕ್ಕಹಳ್ಳ ತುಂಬಿ ಹರಿದು, ರೈತರ ಕಣದೊಳಗೆ ಎಂಟ್ರಿ ಕೊಟ್ಟಿದೆ. ಪರಿಣಾಮ ಕಣದಲ್ಲಿ ಸಂಗ್ರಹಿಸಿಟ್ಟಿದ್ದ ಅಪಾರ ಪ್ರಮಾಣದ ಸೂರ್ಯಕಾಂತಿ ಬೆಳೆ ರಾಶಿಗಳು ನೀರಲ್ಲಿ ತೇಲಾಡುವಂತಾಗಿವೆ. ಕಟಾವು ಮಾಡಿ ಸಂಗ್ರಹಿಸಿಟ್ಟಿದ್ದ ರಾಶಿಗಳೆಲ್ಲವೂ ಮಳೆ ನೀರಿನಲ್ಲಿ ಮುಳಗಡೆಯಾಗಿರೋದ್ರಿಂದ ರೈತ ಇಷ್ಟು ದಿನ ಕಷ್ಟಪಟ್ಟಿದ್ದೆಲ್ಲವೂ ನೀರಲ್ಲಿ ಹೋಮ ಮಾಡಿದಂತಾಗಿದೆ.
ಇತ್ತ ಕೊರ್ಲಹಳ್ಳಿ ಗ್ರಾಮದಲ್ಲಿಯೂ ಸಹ ರೈತ ವೀರಣ್ಣ ಮಜ್ಜಗಿ ತನ್ನ ನಾಲ್ಕು ಎಕರೆಯಲ್ಲಿ ಬೆಳೆದಿದ್ದ ಬೀಜೋತ್ಪಾದನೆಯ ಸೌತೆಹಣ್ಣು, ಬೆಂಡೆ ಬೆಳೆಯನ್ನ ವರುಣಾಸುರ ನುಂಗಿ ಹಾಕಿದ್ದಾನೆ. ಒಟ್ಟಾರೆ ರಾತ್ರಿ ಸುರಿದ ಮಳೆರಾಯನ ಆರ್ಭಟ ಅನ್ನದಾತರನ್ನ ಕಣ್ಣೀರಲ್ಲಿ ಕೈ ತೊಳೆಯುವಂತೆ ಮಾಡಿದ್ದು, ಸಂಬಂಧಿಸಿದ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲಿಸುವಂತೆ ರೈತರು ಅಳಲು ತೋಡಿಕೊಂಡಿದ್ದಾರೆ.
PublicNext
02/09/2022 02:07 pm