ಗದಗ: ನಾಲ್ಕೈದು ವರ್ಷಗಳಿಂದ ಮಳೆರಾಯನ ಅವಕೃಪೆಯಿಂದ ಕಂಗೆಟ್ಟ ಗದಗ ಜಿಲ್ಲೆಯ ರೈತರು ಈ ವರ್ಷ ಅತಿ ಮಳೆಯಿಂದಾಗಿ ಬೆಳೆ ಹಾಳಾಗಿ ನೆಮ್ಮದಿಯನ್ನೇ ಕಳೆದುಕೊಂಡಿದ್ದಾರೆ. ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲವೆಂಬಂತೆ ಕಟಾವಿಗೆ ಬಂದ ಬೆಳೆಗಳೆಲ್ಲ ಕಳೆದೆರಡು ದಿನಗಳಲ್ಲಿ ಸುರಿದ ಧಾರಾಕಾರ ಮಳೆಗೆ ಕೊಚ್ಚಿಕೊಂಡು ಹೋಗಿದ್ದು, ಒಂದೆಡೆಯಾದರೆ ಹೊಲದಲ್ಲಿಯೇ ಮೊಣಕಾಲವರೆಗೆ ನೀರು ನಿಂತು ಹೊಲದಲ್ಲಿಯೇ ಬೆಳೆ ಕೊಳೆಯುತ್ತಿದೆ.
ಹೌದು. ಈ ವರ್ಷ ಉತ್ತಮ ಮುಂಗಾರು ಪ್ರವೇಶವಾಗಿದ್ದರಿಂದ ರಾಜ್ಯಾದ್ಯಂತ ರೈತರಲ್ಲಿ ಮಂದಹಾಸ ಮೂಡಿತ್ತು. ಬಿತ್ತಣಿಕೆಯೂ ಸಹ ನಿರೀಕ್ಷೆಗಿಂತೆ ಹೆಚ್ಚಾಗಿತ್ತು. ಫಸಲು ಸಹ ನಳನಳಿಸಿ ಇಳುವರಿಯಲ್ಲಿ ಹೆಚ್ಚಾಗುವ ಸಾಧ್ಯತೆಯಿತ್ತು. ಆದರೆ ಕಳೆದೆರಡು ದಿನಗಳಲ್ಲಿ ಸುರಿದ ಮಳೆ ರೈತರ ನೆಮ್ಮದಿಯ ಬದುಕನ್ನೇ ಕಸಿದುಕೊಂಡಿದೆ.
ಜಿಲ್ಲೆಗಳಲ್ಲಿರುವ ರೈತರ ಬೆಳೆ ಮಳೆಯಲ್ಲಿ ಕೊಚ್ಚಿಕೊಂಡು ಹೋಗಿದೆ. ಜಿಲ್ಲೆಗಳಲ್ಲಿ ಹೆಸರು, ಉದ್ದು, ಮೆಕ್ಕೆಜೋಳ, ಈರುಳ್ಳಿ, ಹತ್ತಿ ಸೇರಿದಂತೆ ಇತರ ಬೆಳೆಗಳು ಹಾಳಾಗಿ ಹೋಗಿವೆ.
PublicNext
29/08/2022 01:10 pm