ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗದಗ: ಹಗೆಯಲ್ಲಿ ಸಂಗ್ರಹಿಸಿಟ್ಟಿದ್ದ ನೂರಾರು ಕ್ವಿಂಟಾಲ್ ಜೋಳ ನೀರುಪಾಲು; ರೈತರು ಕಂಗಾಲು.!

ಗದಗ: ರಾಜ್ಯದಲ್ಲಿ ನಿರಂತರ ಮಳೆಗೆ ಸಾಕಷ್ಟು ಪ್ರಮಾಣದಲ್ಲಿ ಹಾನಿಯಾಗಿದೆ. ಇತ್ತ‌ ಮಳೆ ನಿಂತರೂ ಮರದ‌ ಹನಿ‌ ನಿಂತಿಲ್ಲ ಅನ್ನೋ ಹಾಗೆ ಗದಗ ಜಿಲ್ಲೆಯಲ್ಲಿ‌ ರೈತರು ತಮ್ಮ ದವಸ ಧಾನ್ಯಗಳನ್ನ ಸಂಗ್ರಹಿಸಿಡುವ ಹಗೆಯಲ್ಲಿ ನೀರು ನುಗ್ಗಿ ರೈತರು ಸಂಗ್ರಹಿಸಿಟ್ಟಿದ್ದ ನೂರಾರು ಕ್ವಿಂಟಾಲ್ ಜೋಳ ನೀರುಪಾಲಾಗಿದೆ.

ರೋಣ ತಾಲೂಕಿನ ಮಲ್ಲಾಪೂರ ಗ್ರಾಮದಲ್ಲಿ ಘಟನೆ ಜರುಗಿದ್ದು, ರೈತರಿಗೆ ವರ್ಷಾನುಗಟ್ಟಲೇ ಆಹಾರವಾಗಬೇಕಿದ್ದ ಜೋಳದ ರಾಶಿ ಸಂಪೂರ್ಣ ಹಾನಿಗೊಳಗಾಗಿದೆ. ಗ್ರಾಮದ ಶಂಕರ್ ಕಳಗಣ್ಣವರ, ಈರಪ್ಪ ಕುರಡಗಿ, ಅಶೋಕ ರಾಯರ, ಅನ್ನೋ ರೈತರಿಗೆ ಸೇರಿದ ಜೋಳದ ಸಂಗ್ರಹ ಇದಾಗಿದ್ದು, ಪೈಪ್‌ಲೈನ್ ನೀರು ಮತ್ತು ಮಳೆ ನೀರು ಹಗೆಗೆ ನುಗ್ಗಿದ ಹಿನ್ನೆಲೆ ಜೋಳ ಸಂಪೂರ್ಣ ಹಾನಿಯಾಗಿದೆ. ರೈತರು ದವಸ ಧಾನ್ಯಗಳು ಕೆಡದಂತೆ ವರ್ಷಾನುಗಟ್ಟಲೆ ಸಂಗ್ರಹಿಸಿಡುವ ಹಗೆಗಳು ಇವಾಗಿದ್ದು, ಸದ್ಯ ನೀರು ಹೊರ ಹಾಕಲು ರೈತರು ಹರಸಾಹಸ‌ ಪಡುತ್ತಿದ್ದಾರೆ.

Edited By : Manjunath H D
PublicNext

PublicNext

16/08/2022 12:25 pm

Cinque Terre

36.01 K

Cinque Terre

2

ಸಂಬಂಧಿತ ಸುದ್ದಿ