ಕೊಪ್ಪಳ:ಸುರಿಯುತ್ತಿರುವ ಅಕಾಲಿಕ ಮಳೆ ಅನ್ನದಾತನನ್ನು ಸಂಕಷ್ಟಕ್ಕೆ ಈಡು ಮಾಡಿದೆ.ಇನ್ನೇನು ಬೆಳೆದ ಬೆಳೆ ಕೈ ಸೇರುತ್ತೆ ಎನ್ನುವಾಗಲೇ ಮೇಘರಾಜನ ಅಬ್ಬರಕ್ಕೆ ಆಹುತಿಯಾಗಿದೆ .ಹೌದು ಭತ್ತದ ನಾಡು ಎಂದೇ ಪ್ರಸಿದ್ಧಿ ಪಡೆದ ಗಂಗಾವತಿ ತಾಲೂಕಿನ ವಿವಿಧ ಕಡೆಗಳಲ್ಲಿ ಅಧಿಕ ಮಳೆಯಿಂದ ಭತ್ತ ಬೆಳೆದ ರೈತರು ಕಂಗಾಲಾಗಿದ್ದಾರೆ.
ಅಕಾಲಿಕ ಮಳೆಗೆ ಭತ್ತ ಸಂಪೂರ್ಣ ನಾಶವಾಗಿದೆ,ಭತ್ತ ಕಟಾವು ಮಾಡಿ ರೈತರು ರಾಶಿ ಹಾಕಿದ್ದರು ಆದರೆ ರಾಶಿಯಲ್ಲೇ ಭತ್ತ ಮೊಳಕೆಯೊಡೆದಿದೆ ಭತ್ತ ಮೊಳಕೆಯೊಡೆದದನ್ನು ಕಂಡು ರೈತರು ಕಣ್ಣೀರು ಹಾಕುತ್ತಿದ್ದಾರೆ.
ಸಾಲ ಸೂಲ ಮಾಡಿ ಗದ್ದೆಯನ್ನು ಗುತ್ತಿಗೆ ಪಡೆದು ಭತ್ತ ಬೆಳೆದವರ ಪಾಡು ಹೇಳತೀರದಂತಾಗಿದೆ.ಇನ್ನು ಸ್ಥಳಕ್ಕೆ ಮಾಜಿ ಎಂ.ಎಲ್.ಸಿ ಎಚ್.ಆರ್ ಶ್ರೀನಾಥ್ ಬೇಟಿ ನೀಡಿ ರೈತರ ಕಷ್ಟ ಆಲಿಸಿದ್ದಾರೆ.ಹಾಗೂ ಸರ್ಕಾರ ಈ ಕೂಡಲೇ ಪರಿಹಾರ ನೀಡುವಂತೆ ಆಗ್ರಹಿಸಿದ್ದಾರೆ.
PublicNext
22/11/2021 10:17 am