ಉತ್ತರಾಖಂಡ್ ನ ದ್ರೌಪದಿ ದಂಡಾ-2 ಪರ್ವತದಲ್ಲಿ ಸಂಭವಿಸಿದ್ದ ಹಿಮಪಾತದಲ್ಲಿ ಸಿಲುಕಿದ್ದ 33 ಮಂದಿಯಲ್ಲಿ 10 ಮಂದಿಯ ಮೃತದೇಹ ಪತ್ತೆಯಾಗಿವೆ. ಈಗಾಗಲೇ 7 ಮಂದಿಯನ್ನ ರಕ್ಷಣೆ ಮಾಡಲಾಗಿದ್ದು, 18 ಮಂದಿ ಮಿಸ್ಸಿಂಗ್ ಆಗಿದ್ದಾರೆ ಎಂದು ವರದಿಯಾಗಿದೆ. ಉತ್ತರಾಖಂಡ್ ನ ನೆಹರು ಪರ್ವತಾರೋಹಣ ಸಂಸ್ಥೆಯ 40 ಪ್ರಶಿಕ್ಷಣಾರ್ಥಿಗಳು ಹಿಮಪರ್ವತಕ್ಕೆ ಹೋಗಿದ್ದರು. 16 ಸಾವಿರ ಫೀಟ್ ಎತ್ತರಿದಿಂದ ಪರ್ವತಾರೋಹಣಿಗಳ ಮೇಲೆ ಬಿದ್ದಿದೆ.
2 ಚೀತಾ ಹೆಲಿಕಾಪ್ಟರ್ಗಳು ರಕ್ಷಣಾ ಕಾರ್ಯಕ್ಕೆ ಇಳಿದಿವೆ. ಜೊತೆಗೆ NDRF, SDRF, ITBP ಸಿಬ್ಬಂದಿಯಿಂದಲೂ ರಕ್ಷಣಾ ಕಾರ್ಯ ನಡೆಯುತ್ತಿದೆ.
PublicNext
04/10/2022 08:02 pm