ಗದಗ: ಮುದ್ರಣ ಕಾಶಿಯಲ್ಲಿ ನಿನ್ನೆ ರಾತ್ರಿ ಸುರಿದ ಧಾರಾಕಾರ ಮಳೆಗೆ ಸಾಕಷ್ಟು ಅವಾಂತರಗಳೇ ಸೃಷ್ಠಿಯಾಗಿವೆ. ಅದರಲ್ಲೂ ಮೂಕ ಪ್ರಾಣಿಗಳ ಸ್ಥಿತಿ ಕರುಣಾಜನವಾಗಿದೆ.
ಗದಗ ತಾಲೂಕಿನ ನೀಲಗುಂದ ಗ್ರಾಮದ ದೊಡ್ಡಹಳ್ಳಕ್ಕೆ ಹೊಂದಿಕೊಂಡ ರಸ್ತೆಯಲ್ಲಿ 20 ಕ್ಕೂ ಹೆಚ್ಚು ಕುರಿ ಹಾಗೂ ಮೇಕೆಗಳು, ನೀರಿನ ರಭಸಕ್ಕೆ ಕೊಚ್ಚಿ ಹೋಗಿ ಸಾವನ್ನಪ್ಪಿವೆ. ಇನ್ನೂ ಹತ್ತಕ್ಕಿಂತಲೂ ಹೆಚ್ಚು ಕುರಿಗಳು ನೀರಿನ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದು ಪತ್ತೆಯಾಗಿಲ್ಲ. ಪಕ್ಕದ ಕಲ್ಲೂರ ಗ್ರಾಮದ ಹನಮಪ್ಪ ದೊಡ್ಡಮನಿ ಅನ್ನೋರಿಗೆ ಈ ಕುರಿಗಳು ಸೇರಿದ್ದು ನೀಲಗುಂದದಿಂದ ಕೋಳಿವಾಡ ಮಾರ್ಗದ ರಸ್ತೆಯಲ್ಲಿ ಈ ಕುರಿಗಳನ್ನ ಮಳೆ ಬಂದ ಹಿನ್ನಲೆ ನಿಲ್ಲಿಸಲಾಗಿತ್ತು.
ಮಧ್ಯರಾತ್ರಿ ಪಕ್ಕದ ಜಮೀನಿನಿಂದ ಏಕಾಏಕಿ ಮಳೆನೀರಿನ ಪ್ರವಾಹ ಬಂದಿದ್ದರಿಂದ ಕುರಿಗಳೆಲ್ಲ ಕೊಚ್ಚಿಹೋದವು. ಕೈಗೆ ಸಿಕ್ಕ ಕುರಿಗಳನ್ನಷ್ಟೇ ಬಚಾವ್ ಮಾಡಿಕೊಂಡು, ನಾವೂ ಸಹ ಬದುಕಿದೆವು ಅನ್ನೋದು ಕುರಿಹಾಹಿಗಳ ಮಾತಾಗಿದೆ. ಒಟ್ಟಾರೆ ಮೂವತ್ತುಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿದ್ದು ಸರ್ಕಾರದ ಪರಿಹಾರಕ್ಕೆ ಕುರಿಗಾಹಿಗಳು ಎದುರು ನೋಡ್ತಿದ್ದಾರೆ.
PublicNext
06/09/2022 07:18 pm