ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗದಗ: ಮಳೆಗೆ ಕೊಚ್ಚಿ ಹೋದ ಆಟೋರಿಕ್ಷಾ: ಪ್ರಾಣಾಪಾಯದಿಂದ ಪಾರಾದ ತಂದೆ-ಮಕ್ಕಳು

ಗದಗ: ಜಿಲ್ಲೆಯಾದ್ಯಂತ ಸೋಮವಾರ ರಾತ್ರಿ ಸುರಿದ ಭಾರಿ ಮಳೆಯಿಂದ ಗದಗ ತಾಲ್ಲೂಕಿನ ಹುಲಕೋಟಿ ಗ್ರಾಮದ ಹರ್ತಿ ರೋಡಿನಲ್ಲಿರುವ ಹಳ್ಳದಲ್ಲಿ ರಸ್ತೆ ದಾಟುವಾಗ ಆಟೋರಿಕ್ಷಾವೊಂದು ಕೊಚ್ಚಿಕೊಂಡು ಹೋಗಿದ್ದು, ಅದೃಷ್ಟವಶಾತ್ ಆಟೋದಲ್ಲಿದ್ದ ಚಾಲಕ ಕರಿಯಪ್ಪ ಕರಿಯಣ್ಣವರ, ಮಗ ಪ್ರವೀಣ, ಒಂದು ವರ್ಷದ ಮಗು ಸಾನ್ವಿ ಹಾಗೂ ಪ್ರಯಾಣಿಕ ಗುರಪ್ಪ ಕೊಂಡಿಕೊಪ್ಪ ಸ್ವಲ್ಪದರಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಎಂದಿನಂತೆ ರಾತ್ರಿ ಹೊಲಕ್ಕೆ ಹೋಗುವ ಗುರಪ್ಪ ಕೊಂಡಿಕೊಪ್ಪ ಅವರನ್ನು ಬಿಟ್ಟುಬರಲು ತೆರಳಿದ್ದ ಆಟೋಚಾಲಕ ಕರಿಯಪ್ಪ ಮಳೆಯಲ್ಲಿ ತಮ್ಮ‌ಮಕ್ಕಳನ್ನು ಕರೆದುಕೊಂಡು ಹೋಗಿದ್ದ, ಹರ್ತಿ ರಸ್ತೆಯಲ್ಲಿರುವ ಹಳ್ಳವನ್ನು ದಾಟುತ್ತಿರುವ ಸಂದರ್ಭದಲ್ಲಿ ಒಮ್ಮೆಲೆ ಹೆಚ್ಚಿನ ಪ್ರಮಾಣದಲ್ಲಿ ಹರಿದು ಬಂದಿದ್ದರಿಂದ

ಹಳ್ಳದ ಮಧ್ಯದಲ್ಲಿ ಆಟೋರಿಕ್ಷಾ ಕೆಟ್ಟು ನಿಂತು ಮರುಕ್ಷಣವೆ ಹಳ್ಳದಲ್ಲಿ ಕೊಚ್ಚಿಕೊಂಡು ಹೋಗುತ್ತಿರುವಾಗ ಅಪಾಯದ ಸುಳಿವನ್ನು ಅರಿತ ಚಾಲಕ ಹಾಗೂ ಪ್ರಯಾಣಿಕ ಮಕ್ಕಳನ್ನು ಗಟ್ಟಿಯಾಗಿ ಹಿಡಿದುಕೊಂಡು ದಡ ಸೇರಿ ಜೀವವನ್ನು ಉಳಿಸಿಕೊಂಡಿದ್ದಾರೆ. ಕೊಚ್ಚಿಹೋದ ಅಟೋರಿಕ್ಷಾ ಸುಮಾರು 300 ಅಡಿ ದೂರದಲ್ಲಿ ಗಿಡಕಂಠಿಗಳ ಮಧ್ಯೆ ಸಿಲುಕಿಕೊಂಡಿದೆ.

Edited By : Abhishek Kamoji
PublicNext

PublicNext

06/09/2022 05:48 pm

Cinque Terre

35.18 K

Cinque Terre

0