ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗದಗ: ತುಂಬಿ ಹರಿದ ಹಳ್ಳ: ಬೈಕ್ ಸಮೇತ ಹಳ್ಳ ದಾಟಲು ಹೋಗಿ ಫಜೀತಿ

ಗದಗ: ತುಂಬಿ‌ ಹರಿತಿರೋ ಹಳ್ಳ ದಾಟುವ ವೇಳೆ ಬೈಕ್ ಕೊಚ್ಚಿ ಹೋಗಿ,‌ ಅದೃಷ್ಟವಶಾತ್ ಯುವಕ ಬಚಾವ್ ಆಗಿರೋ ಘಟನೆ ಗದಗ ಜಿಲ್ಲೆ ರೋಣ ತಾಲೂಕಿನ ಯಾವಗಲ್ ಗ್ರಾಮದ ಬಳಿ ನಡೆದಿದೆ.

ರೋಣ ಹಾಗೂ ನರಗುಂದ ತಾಲೂಕಿನಲ್ಲಿ ನಿನ್ನೆಯಿಂದ ಭಾರಿ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಪರಿಣಾಮ ಯಾವಗಲ್ ಬಳಿ ಇರುವ ಹಳ್ಳ ಉಕ್ಕಿ ಹರಿಯುತ್ತಿದೆ. ಈ ವೇಳೆ‌, ಯಾವಗಲ್ ಗ್ರಾಮದ ಕುಮಾರ ಬ್ಯಾಟಿ ಎಂಬ ಯುವಕ ತನ್ನ ಜಮೀನು ಕೆಲಸ ಮುಗಿಸಿಕೊಂಡು ಮನೆಗೆ ಬರುವ ವೇಳೆ ಈ ಅವಘಡ ಸಂಭವಿಸಿದೆ.

ಹಳ್ಳ ದಾಟುವ ವೇಳೆ ಬೈಕ್‌ನೊಂದಿಗೆ ಕೊಚ್ಚಿ ಹೋಗುತ್ತಿದ್ದ ಯುವಕನನ್ನ ಸ್ಥಳೀಯರು ರಕ್ಷಣೆ‌ ಮಾಡಿದ್ದಾರೆ. ನಂತರದಲ್ಲಿ ಸ್ಥಳೀಯರು ಹರಸಾಹಸ ಪಟ್ಟು ಬೈಕ್‌ನ್ನು ಹೊರತೆಗೆದಿದ್ದಾರೆ.

Edited By :
PublicNext

PublicNext

01/09/2022 10:20 pm

Cinque Terre

46.26 K

Cinque Terre

1

ಸಂಬಂಧಿತ ಸುದ್ದಿ