ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗದಗ: ಕೆರೆಯ ರೌದ್ರವತೆ ಮಧ್ಯೆ ಶ್ವಾನ ಫಜೀತಿ; ಪ್ರಾಣ ಪಣಕ್ಕಿಟ್ಟು ರಕ್ಷಿಸಿದ ಯುವ ಸಾಹಸಿ

ಗದಗ: ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ಕೆರೆಹಳ್ಳಿ ಗ್ರಾಮದ ಕೆರೆ ಮೈದುಂಬಿ ಹರಿಯುತ್ತಿದ್ದು, ನಡುವಿನಲ್ಲಿ ಸಿಲುಕಿದ ನಾಯಿಯನ್ನು ಯುವಕನೊಬ್ಬ ತನ್ನ ಪ್ರಾಣದ ಹಂಗು ತೊರೆದು ರಕ್ಷಿಸಿದ್ದಾನೆ.

ಕೆರೆಹಳ್ಳಿ ಗ್ರಾಮದಲ್ಲಿ ವಾರದಿಂದಲೂ ನಿರಂತರ ಬಿರುಸಿನ ಮಳೆಯಾಗಿದ್ದರಿಂದ ಕೆರೆ ತುಂಬಿ ರಭಸದಿಂದ ಹರಿಯುತ್ತಿದೆ. ಈ ನಡುವೆ ನಾಯಿಯೊಂದು ಕೆರೆ ಮಧ್ಯೆ ಸಿಕ್ಕಿ ಹಾಕಿಕೊಂಡು, ನೆರವಿಗಾಗಿ ಬೊಬ್ಬಿರಿಯುತ್ತಿತ್ತು. ಇದನ್ನು ಗಮನಿಸಿದ ಕೆಲ ಯುವಕರು ನಾಯಿಯನ್ನು ರಕ್ಷಣೆ ಮಾಡಲು ಮುಂದಾಗಿದ್ದಾರೆ. ‌

ಬಿರುಸಾಗಿ ಹರಿಯುತ್ತಿದ್ದ ಕೆರೆಯಲ್ಲಿ ಸ್ವಲ್ಪ ಆಯ ತಪ್ಪಿದರೆ ಯುವಕ ನೀರಿನಲ್ಲಿ ಕೊಚ್ಚಿ ಹೋಗುವ ಅಪಾಯವಿತ್ತು. ಆದರೂ ಯುವಕ ಧೈರ್ಯ- ಆತ್ಮವಿಶ್ವಾಸದಿಂದ ಶ್ವಾನವನ್ನು ರಕ್ಷಣೆ ಮಾಡುವುದರಲ್ಲಿ ಯಶಸ್ವಿ ಆಗಿದ್ದಾನೆ.

Edited By :
PublicNext

PublicNext

02/08/2022 10:41 pm

Cinque Terre

43.98 K

Cinque Terre

1

ಸಂಬಂಧಿತ ಸುದ್ದಿ