ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿರಾ:ನೀರು ಹರಿಯುತ್ತಿದ್ದ ಸೇತುವೆ ದಾಟಲು ಹೋಗಿ ಕೊಚ್ಚಿ ಹೋದ ಶಿಕ್ಷಕ !

ಶಿರಾ: ತಾಲೂಕಿನ ದಾವೂದ್ ಪಾಳ್ಯ(ಹೊನ್ನಗೊಂಡನಹಳ್ಳಿ) ಶಾಲೆಯ ಶಿಕ್ಷಕರಾದ ಆರಿಫ್ ಉಲ್ಲಾಖಾನ್ ಇಂದು ದಾವೂದ್ ಪಾಳ್ಯ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸಿ ಸಂಜೆ ತಮ್ಮ ಶಿರಾ ನಗರದ ಮನೆಗೆ ಬರುವ ಸಂದರ್ಭದಲ್ಲಿ ಚನ್ನಕುಂಟೆ ಬಳಿ ಸೇತುವೆ ದಾಟುವಾಗ ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದಾರೆ.

ಪೊಲೀಸ್ ಇಲಾಖೆ ಮತ್ತು ಅಗ್ನಿಶಾಮಕ ದಳದ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ಮೃತದೇಹ ಹೊರ ತೆಗೆದಿದ್ದಾರೆ. ಅಧಿಕಾರಿಗಳೊಂದಿಗೆ ಕಾರ್ಯಾಚರಣೆಯ ವೇಳೆ ಸ್ಥಳೀಯ ಅಗ್ನಿಶಾಮಕದಳ ಸಿಬ್ಬಂದಿ ಗೆ ಸಾಥ್ ನೀಡಿದರು.

ಮೃತ ಶಿಕ್ಷಕನ ಸಂಬಂಧಿಕರು ಆಕ್ರಂದನ ಮುಗಿಲು ಮುಟ್ಟಿತ್ತು. ಶಿಕ್ಷಕರ ಸಾವು ಕಾಡ್ಗಿಚ್ಚಿನಂತೆ ತಾಲೂಕಿನಾದ್ಯಂತ ಹಬ್ಬಿದ್ದು ತಾಲೂಕಿನಾದ್ಯಂತ ಶೋಕದ ಛಾಯೆ ಆವರಿಸಿದೆ.

- ರಾಘವೇಂದ್ರ ದಾಸರಹಳ್ಳಿ, ಪಬ್ಲಿಕ್ ನೆಕ್ಸ್ಟ್

Edited By : Shivu K
PublicNext

PublicNext

02/08/2022 09:32 pm

Cinque Terre

47.34 K

Cinque Terre

0

ಸಂಬಂಧಿತ ಸುದ್ದಿ