ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾವೇರಿ: ಸ್ನಾನಕ್ಕೆ ಹೋಗುತ್ತಿದ್ದಾಗ ಏಕಾಏಕಿ ಕುಸಿದ ಗೋಡೆ- ವೃದ್ಧೆ ಸಾವು

ಹಾವೇರಿ: ಮನೆ ಗೋಡೆ ಕುಸಿದು ವೃದ್ಧೆಯೊಬ್ಬಳು ಸಾವನ್ನಪ್ಪಿದ ಘಟನೆ ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲ್ಲೂಕಿನ ತಡಸ ಗ್ರಾಮದಲ್ಲಿ ನಡೆದಿದೆ.

ತಡಸ ಗ್ರಾಮದ ನಿವಾಸಿ 62 ಪದ್ಮಮ್ಮ ಶಿವನಗೌಡ ಪಾಟೀಲ ಎಂದು ಗುರುತಿಸಲಾಗಿದೆ. ತಡಸ ಗ್ರಾಮದ ಗ್ರಾಮ ಪಂಚಾಯಿತಿ ಎದುರಿನ ಬಸ್ ಸ್ಟ್ಯಾಂಡ್ ಹಿಂಬದಿಯಿರುವ ಕಟ್ಟಡದ ಗೋಡೆ ಕುಸಿದು ಬಿದ್ದಿದ್ದು, ವೃದ್ಧೆ ಸಾವನ್ನಪ್ಪಿದ್ದಾಳೆ. ಪದ್ಮಮ್ಮ ಪಾಟೀಲ್ ಎಂದಿನಂತೆ ಮನೆಯ ಕೆಲಸ ಕಾರ್ಯಗಳೆಲ್ಲ ಮುಗಿಸಿಕೊಂಡು ಸ್ನಾನಕ್ಕೆ ಹೋಗುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ಕಟ್ಟಡದ ಗೋಡೆ ಅವರ ಮೇಲೆಯೆ ಕುಸಿದು ಬಿದ್ದಿದೆ. ನಂತರ ಅಲ್ಲಿದ್ದ ಕೆಲ ಗ್ರಾಮಸ್ಥರು ವೃದ್ಧೆಯನ್ನು ರಕ್ಷಣೆ ಮಾಡಲು ಮುಂದಾಗಿದ್ದಾರೆ. ಆದರೆ ಕಲ್ಲುಗಳಿಂದ ಕಟ್ಟಲಾಗಿದ್ದ ಗೊಡೆ ಪದ್ಮಮ್ಮ ಮೇಲೆ ನೇರವಾಗಿ ಬಿದ್ದ ಕಾರಣ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾಳೆ. ನಿರಂತರ ಮಳೆಯಿಂದಾಗಿ ಕಟ್ಟಡ ಶಿಥಿಲಗೊಂಡಿದ್ದು ಕಟ್ಟಡ ಬೀಳುವ ದೃಶ್ಯವು ಅಲ್ಲಿನ ಸ್ಥಳೀಯರು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ.

ವರದಿ- ಈರನಗೌಡ ಪಾಟೀಲ

Edited By : Manjunath H D
PublicNext

PublicNext

30/07/2022 08:30 am

Cinque Terre

67.37 K

Cinque Terre

0

ಸಂಬಂಧಿತ ಸುದ್ದಿ