ವಿಜಯಪುರ: ಕೃಷ್ಣಾ ನದಿ ದಡದಲ್ಲಿ ಕುರಿ ಮೇಯಿಸುತ್ತಿದ್ದ ಕುರಿಗಾಯಿ ಮೇಲೆ ಮೊಸಳೆ ದಾಳಿ ಮಾಡಿದೆ. ನದಿಯಲ್ಲಿ ಮೃತ ದೇಹ ತೇಲಿ ಬಂದ್ಮೇಲೆನೆ ಈ ಒಂದು ಸತ್ಯ ಈಗ ತಿಳಿದಿದೆ. ಮುದ್ದೇಬಿಹಾಳ ತಾಲೂಕಿನ ಹಂಡರಗಲ್ಲ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಮೊಸಳೆ ದಾಳಿಗೆ ಬಲಿಯಾದ ಕುರಿಗಾಯಿಯನ್ನ ನಾಗಪ್ಪ ಸಂಜೀವಪ್ಪ ಉಂಡಿ (55) ಎಂದು ಗುರುತಿಸಲಾಗಿದ್ದು ಮುದ್ದೇಬಿಹಾಳ ತಾಲೂಕಿನ ಹಂಡರಗಲ್ಲ ಗ್ರಾಮದ ನಿವಾಸಿ ಆಗಿದ್ದಾರೆ.
ಮೊಸಳೆ ದಾಳಿಯಿಂದಲ ಈಗ ಗ್ರಾಮಸ್ಥರದಲ್ಲಿ ಆತಂಕ ಹೆಚ್ಚಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ದಳ ಹಾಗೂ ಅರಣ್ಯ ಸಿಬ್ಬಂದಿ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹ ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೂ ರವಾನಿಸಲಾಗಿದೆ. ಮುದ್ದೇಬಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
PublicNext
30/06/2022 01:32 pm