ಯಾದಗಿರಿ: ಇಂದು ಸಂಜೆ ವೇಳೆ ಮಳೆ ಗಾಳಿ ಜೋರಾಗಿದ್ದಕ್ಕೆ ಸಿಡಿಲು ಬಡಿದು ವ್ಯಕ್ತಿ ಮೃತಪಟ್ಟಿರುವ ಘಟನೆ ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ಮಂಗಿಹಾಳ ಗ್ರಾಮದಲ್ಲಿ ನಡೆದಿದೆ.
ನಿಂಗಪ್ಪ ತಂದೆ ಭೀಮಣ್ಣ (28) ಮೃತ ವ್ಯಕ್ತಿ ಸುರಪುರ ತಾಲ್ಲೂಕಿನ ವಾಗಣಗೇರಾ ಗ್ರಾಮದ ನಿವಾಸಿಯಾಗಿದ್ದು, ಇನ್ನಿಬ್ಬರು ಬಾಲಕರಿಗೆ ಗಂಭೀರ ಗಾಯಗಳಾಗಿವೆ. ಕುರಿಗಾಹಿ ನಿಂಗಪ್ಪ ಹಾಗೂ ಇಬ್ಬರು ಬಾಲಕರು ಮಂಗಿಹಾಳ ಗ್ರಾಮದ ರೈತನೊರ್ವ ಜಮೀನಿನಲ್ಲಿ ಕುರಿಗಳು ಮೇಯಿಸುತ್ತಿದ್ದು, ಕುರಿಗಳಿಗೆ ಬೇವಿನ ಸೊಪ್ಪು ತರಲು ಹೋದಾಗ ಸಿಡಿಲು ಬಡಿದು ಈ ದುರ್ಘಟನೆ ಸಂಭವಿಸಿದೆ.
ಈ ಘಟನೆ ನಡೆದ ಸ್ಥಳಕ್ಕೆ ಸುರಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸಿಡಿಲಿನ ಹೊಡೆತ ಕಂಡ ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ. ಇನ್ನು ಈ ಬಗ್ಗೆ ಸುರಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಿ: ಮೌನೇಶ ಬಿ. ಮಂಗಿಹಾಳ, ಪಬ್ಲಿಕ್ ನೆಕ್ಸ್ಟ್ ಯಾದಗಿರಿ
PublicNext
18/05/2022 07:57 am