ಕೊಪ್ಪಳ:ಅಪರಿಚಿತ ವಾಹನ ಕರಡಿಗೆ ಡಿಕ್ಕಿಹೊಡೆದ ಪರಿಣಾಮ ಕರಡಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಯಲಬುರ್ಗಾ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 50 ರ ಮ್ಯಾದಿನೇರಿ ಬಳಿ ಇಂದು ಬೆಳಗಿನ ಜಾವ ನಡೆದಿದೆ.
ಎರಡುವರೆ ವರ್ಷದ ಗಂಡು ಕರಡಿ ರಸ್ತೆ ದಾಟುವಾಗ ವೇಗವಾಗಿ ಬಂದು ವಾಹನ ಡಿಕ್ಕಿ ಹೊಡೆದಿದ್ದರಿಂದ ಕರಡಿಗೆ ಗಾಯವಾಗಿತ್ತು ಬಳಿಕ ನೀರು ಕುಡಿಸಿ ಸ್ಥಳೀಯರು ಆರೈಕೆ ಮಾಡಿದ್ದಾರೆ. ಆರೈಕೆ ಫಲಕಾರಿಯಾಗದೆ ಕರಡಿ ಸಾವನ್ನಪ್ಪಿದೆ. ಬೇವೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
PublicNext
22/12/2021 02:04 pm