ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೂದಲೆಳೆ ಅಂತರದಲ್ಲಿ ಬದುಕುಳಿದ 30 ಮಂದಿ

ಡೆಹ್ರಾಡೂನ್: ಕಣಿವೆ ರಾಜ್ಯ ಉತ್ತರಾಖಂಡದಲ್ಲಿ ಬೃಹತ್ ಗುಡ್ಡವೊಂದು ನೋಡನೋಡುತ್ತಿದ್ದಂತೆಯೇ ಧರೆಗುರುಳಿದ್ದು, ಇದೇ ಮಾರ್ಗವಾಗಿ ಹೋಗುತ್ತಿದ್ದ ವಾಹನವೊಂದರಲ್ಲಿದ್ದ ಪ್ರಯಾಣಿಕರು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಉತ್ತರಾಖಂಡ್​ನ ನೈನಿಟಾಲ್​ನಲ್ಲಿ ಗುಡ್ಡ ಕುಸಿತವಾಗಿದೆ. ಭೂಕುಸಿತ ಸಂಭವಿಸುವ ವೇಳೆ ಬಸ್​​​ವೊಂದು ಹತ್ತಿರದಲ್ಲೇ ತೆರಳುತ್ತಿತ್ತು. ಈ ವೇಳೆ ಭಾರೀ ಪ್ರಮಾಣದಲ್ಲಿ ಮಣ್ಣು ಕುಸಿದುಬಿದ್ದಿದೆ. ಬಸ್​ನಲ್ಲಿದ್ದ ಪ್ರಯಾಣಿಕರು ತಕ್ಷಣವೇ ಇಳಿದು ಓಡಿಹೋಗಿದ್ದಾರೆ. ಬಸ್​ನ ಡ್ರೈವರ್ ತಕ್ಷಣವೇ ಬಸ್ ಅ​ನ್ನು ಹಿಂದಕ್ಕೆ ಚಲಾಯಿಸಿ ಪ್ರಯಾಣಿಕರ ಪ್ರಾಣ ಉಳಿಸಿದ್ದಾನೆ. ಬಸ್​ನಲ್ಲಿ 30ಕ್ಕೂ ಹೆಚ್ಚು ಪ್ರಯಾಣಿಕರು ಇದ್ದರು ಎನ್ನಲಾಗಿದೆ.

Edited By : Nagesh Gaonkar
PublicNext

PublicNext

21/08/2021 05:00 pm

Cinque Terre

123.4 K

Cinque Terre

3

ಸಂಬಂಧಿತ ಸುದ್ದಿ