ಹಾವೇರಿ: ಕೊಬ್ಬರಿ ಹೋರಿ ಸ್ಪರ್ಧೆಗೆ ಹಾವೇರಿ ಜಿಲ್ಲೆ ಫೇಮಸ್. ಆದರೆ ಕೊಬ್ಬರಿ ಹೋರಿ ಅಖಾಡದಲ್ಲಿ ಮಿಂಚಿನ ಓಟ ಓಡುತ್ತಲೇ ಹೋರಿಯೊಂದು ಕೆರೆಗೆ ಹಾರಿ ದುರಂತ ಸಾವು ಕಂಡಿದೆ.
ಈ ದಾರುಣ ಘಟನೆ ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕಿನ ಸುತ್ತಕೋಟಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಕೆರೆ ದಂಡೆ ಬಳಿ ಹೋರಿ ಓಡುವಾಗ ಆಯತಪ್ಪಿ ಕೆರೆಗೆ ಬಿದ್ದಿದೆ. ಇದೇ ವೇಳೆ ಕುತ್ತಿಗೆಯಲ್ಲಿದ್ದ ಹಗ್ಗ ಕಾಲಿಗೆ ಸಿಕ್ಕಿಕೊಂಡ ಪರಿಣಾಮ ಹೋರಿ ಕೊನೆಯುಸಿರೆಳೆದಿದೆ.
ಕೆರೆಗೆ ಬಿದ್ದ ಹೋರಿಯನ್ನು ಕೂಡಲೇ ಗ್ರಾಮಸ್ಥರು ರಕ್ಷಿಸಲು ಮುಂದಾಗಿದ್ದಾರೆ. ಆದರೆ ಅವರ ಪ್ರಯತ್ನ ವಿಫಲವಾಗಿದೆ.
PublicNext
28/12/2020 10:55 am