ದೈತ್ಯ ತಿಮಿಂಗಿಲು ಅಂದ್ರೆನೇ ಭಯ... ಇನ್ನು ಅದರ ದಾಳಿಯಿಂದ ತಪ್ಪಿಸಿಕೊಂಡು ಬಂದ್ರೆ ಮರು ಜೀವ ಬಂದಂತೇ ಸರಿ. ಇಂತಹ ಘಟನೆಯ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕ್ಯಾಲಿಫೋರ್ನಿಯಾದ ಅವಿಲಾ ಬೀಚ್‌ನಲ್ಲಿ ಈ ಘಟನೆ ನಡೆದಿದೆ. ಜೂಲಿ ಮೆಕ್‌ಸಾರ್ಲಿ ಮತ್ತು ಅವರ ಸ್ನೇಹಿತರಾದ ಲಿಜ್ ಸಣ್ಣ ದೋಣಿಯಲ್ಲಿ ವಿಹಾರ ನಡೆಸಿದ್ದರು. ಖುಷಿಯಲ್ಲಿದ್ದ ಅವರ ಮೇಲೆ ತಿಮಿಂಗಲು ಒಂದು ಏಕಾಏಕಿ ದಾಳಿ ನಡೆಸಿತು. ಬಾಯಿ ತೆರೆದು ಬೇಟೆಗೆ ಒಂದ ತಿಮಿಂಗಲು ಬೋಟನ್ನು ನುಂಗಿತ್ತು. ಈ ದೃಶ್ಯವನ್ನು ಸ್ಥಳದಲ್ಲಿದ್ದವರು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ವಿಡಿಯೋ ನೋಡಿದರೆ ಇಬ್ಬರೂ ತಿಮಿಂಗಿಲದ ಬಾಯಿಯೊಳಗೆ ಸೇರುವಂತೆ ಕಾಣುತ್ತದೆ. ಆದರೆ ಅದೃಷ್ಟವಶಾತ್ ಅವರು ಪ್ರಾಣಾಪಯದಿಂದ ಪಾರಾಗಿದ್ದಾರೆ.
PublicNext
07/11/2020 12:47 pm